ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನಲ್ಲಿ ಹಿಂದು ಪುರುಷರ ನರಮೇಧ ಮಾಡಿದ ಪಾಕಿಸ್ತಾನಕ್ಕೆ ಭಾರತ ಸರಿಯಾಗಿ ಮುಟ್ಟಿ ನೋಡುವಂತೆ ಪ್ರತ್ಯುತ್ತರ ನೀಡಿದೆ. ಕದನ ವಿರಾಮದ ಬಳಿಕವೂ ತನ್ನ ಕ್ರೂರ ಚಾಳಿಯನ್ನು ಮುಂದುವರೆಸುವ ದುಸ್ಸಾಹಸ ತೋರಿದ್ದ ಪಾಪಿಸ್ತಾನಕ್ಕೆ, ಸರಿಯಾಗಿ ಪೆಟ್ಟುಕೊಟ್ಟಿದ್ದು, ಇದರ ಬೆನ್ನಲ್ಲೇ ಇದೀಗ ಟರ್ಕಿಯ ಮೇಲೆಯೂ ಭಾರತ ಆಪರೇಷನ್ ಶುರು ಮಾಡಿದೆ.
ತಾವು ಉಗ್ರರಿಗೆ ಸಪೋರ್ಟ್ ಮಾಡುತ್ತಿಲ್ಲ ಎಂದು ರಾಜಾರೋಷವಾಗಿ ಸುಳ್ಳು ಹೇಳಿದ್ದ ಟರ್ಕಿ ಈಗ ಪಾಕಿಸ್ತಾನಕ್ಕೆ ಗುಟ್ಟಾಗಿ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ. ಹೀಗಾಗಿ ಭಾರತ ಪಾಠ ಕಲಿಸಲು ಮುಂದಾಗಿದೆ. ಭಾರತ ಮತ್ತು ಟರ್ಕಿಯ ನಡುವೆ ಶತಕೋಟಿ ಡಾಲರ್ಗಳ ಒಪ್ಪಂದವಿದೆ. ಆದರೆ ಈಗ ಭಾರತ ಸರ್ಕಾರವು ದೇಶದೊಂದಿಗೆ ತನ್ನ ದ್ವಿಪಕ್ಷೀಯ ನೀತಿಯಲ್ಲಿ ಬದಲಾವಣೆ ತರಲು ನಿರ್ಧರಿಸಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವಾಲಯದೊಂದಿಗೆ ಕೆಲಸ ಮಾಡುತ್ತಿರುವ ಹಿರಿಯ ವ್ಯಾಪಾರ ತಜ್ಞರು, ಎಲ್ಲಾ ಒಪ್ಪಂದಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ ಕೆಲವು ಒಪ್ಪಂದಗಳು ಅದರಲ್ಲಿಯೂ ಮುಖ್ಯವಾಗಿ ವ್ಯಾಪಾರ ಒಪ್ಪಂದಗಳು ಅಥವಾ ಯೋಜನಾ ಒಪ್ಪಂದಗಳನ್ನು ದೀರ್ಘಾವಧಿಯ ಆಧಾರದ ಮೇಲೆ ಮಾಡಲಾಗಿದೆ. ಇದಾಗಲೇ ಭಾರತ ಇವುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.