ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು, ‘ಜೂನಿಯರ್’ ಎಂಬ ಸಿನಿಮಾ ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ.
ಇದೀಗ ಚಿತ್ರತಂಡ ಸದ್ದಿಲ್ಲದೆ ಶೂಟಿಂಗ್ ಮುಗಿಸಿ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.ಜು. 18ಕ್ಕೆ ʼಜೂನಿಯರ್ʼ ಚಿತ್ರ ಬಿಡುಗಡೆಯಾಗಲಿದೆ.
ಕಿರೀಟಿ ನಟಿಸುತ್ತಿರುವ ಮೊದಲ ಸಿನಿಮಾ ಜೂನಿಯರ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ʼಜೂನಿಯರ್ʼ ಸಿನಿಮಾ ರಿಲೀಸ್ ಆಗಲಿದೆ.
ಈ ಹಿಂದೆ ‘ಮಾಯಾ ಬಜಾರ್’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ʼಜೂನಿಯರ್ʼ ಸಿನಿಮಾ ತಯಾರಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿಗ್ ಬಜೆಟ್‌ನಲ್ಲಿ ಮೂಡಿ ಬಂದಿದೆ.
ಇನ್ನು ಕಿರೀಟಿಗೆ ಜೋಡಿಯಾಗಿ ನಟಿ ಶ್ರೀಲೀಲಾ ಸಾಥ್ ಕೊಟ್ಟಿದ್ದಾರೆ. ಜೂನಿಯರ್ ಸಿನಿಮಾದ ತಾಂತ್ರಿಕ ಬಳಗ ಶ್ರೀಮಂತಿಕೆಯಿಂದ ಕೂಡಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, ‘ಬಾಹುಬಲಿ’ ಸಿನಿಮಾ ಖ್ಯಾತಿಯ ಕಣ್ಣು ಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ನಿರ್ದೇಶನ, ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ ಸಾಹಸ ಚಿತ್ರಕ್ಕಿದೆ.
ಇತ್ತ ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಲೀಲಾ ಸದ್ಯ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಕನ್ನಡ, ತೆಲುಗು ಭಾಷೆಗಳಲ್ಲಿ ತಯಾರಾಗಿರುವ ʼಜೂನಿಯರ್ʼ ಸಿನಿಮಾ ಮೂಲಕ ಅವರು ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ.