ಭಾರತದಲ್ಲಿ ಆ್ಯಪಲ್ ಫ್ಯಾಕ್ಟರಿ ಕಟ್ಟಬೇಡಿ: ಐಫೋನ್ ತಯಾರಿಕೆಗೆ ಕಲ್ಲು ಹಾಕಲು ಮುಂದಾದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಐಫೋನ್​​ಗಳನ್ನು ತಯಾರಿಸುತ್ತಿರುವುದು ಡೊನಾಲ್ಡ್ ಟ್ರಂಪ್ ಅವರಿಗೆ ಕೆಂಗಣ್ಣು ತಂದಿದೆ. ಭಾರತದಲ್ಲಿ ಉತ್ಪಾದನೆಯ ವಿಸ್ತರಿಸಿರುವ ಆ್ಯಪಲ್ ಕಂಪನಿ ಮೇಲೆ ಟ್ರಂಪ್ ಒತ್ತಡ ಹೇರುತ್ತಿದ್ಧಾರೆ. ಭಾರತದಲ್ಲಿ ನೀವು ಫ್ಯಾಕ್ಟರಿ ಕಟ್ಟೋದನ್ನು ನಿಲ್ಲಿಸಿ ಎಂದು ತಾನು ಸಿಇಒ ಟಿಮ್ ಕುಕ್​​ಗೆ ತಿಳಿಸಿದ್ದಾಗಿ ಟ್ರಂಪ್ ಹೇಳಿದ್ದಾರೆ.

ಕತಾರ್‌ನಲ್ಲಿ ಮಾತನಾಡಿದ ಅವರು, ಆಪಲ್‌ ಸಿಇಒ ಟಿಮ್‌ ಕುಕ್‌ ನನ್ನ ಸ್ನೇಹಿತ. ನಿನ್ನೆ ಸ್ವಲ್ಪ ಮಾತುಕತೆಯಾಯಿತು. ಅವರು ಭಾರತದೆಲ್ಲೆಡೆ ನಿರ್ಮಿಸುತ್ತಿದ್ದಾರೆ. ಭಾರತದಲ್ಲಿ ನೀವು ಕಟ್ಟೋದು ಬೇಡ. ಭಾರತೀಯರು ತಮ್ಮ ಯೋಗಕ್ಷೇಮ ತಾವೇ ನೋಡಿಕೊಳ್ಳುತ್ತಾರೆ. ಅವರನ್ನು ಬಿಟ್ಟು ಬನ್ನಿ ಅಂತ ಅವರಿಗೆ ಹೇಳಿದೆ. ಈ ಮಾತುಕತೆಯ ಪರಿಣಾಮವಾಗಿ, ಆ್ಯಪಲ್ ಕಂಪನಿ ಅಮೆರಿಕದಲ್ಲಿ ತಯಾರಿಕೆ ಹೆಚ್ಚಿಸಲಿದೆ ಎಂದು ಅಮೆರಿಕ ಅಧ್ಯಕ್ಷರು ವಿವರಿಸಿದ್ದಾರೆ.

ನೀವು 500 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದ್ದೀರಿ, ಆದರೆ ಅದನ್ನು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಂಡೆ. ನೀವು ಭಾರತದಲ್ಲಿ ಹೂಡಿಕೆ ಮಾಡುವುದು ಬೇಡ, ನೀವು ಭಾರತವನ್ನು ನೋಡಿಕೊಳ್ಳಲು ಬಯಸಿದರೆ, ನೀವು ಭಾರತದಲ್ಲಿ ಹೂಡಿಕೆ ಮಾಡಬಹುದು, ಭಾರತ ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಆದ್ದರಿಂದ ಭಾರತದಲ್ಲಿ ಮಾರಾಟ ಮಾಡುವುದು ತುಂಬಾ ಕಷ್ಟ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ನೀವು ಚೀನಾದಲ್ಲಿ ವರ್ಷಗಳಿಂದ ನಿರ್ಮಿಸಿದ ಎಲ್ಲಾ ಸ್ಥಾವರಗಳನ್ನು ನಾವು ಸಹಿಸಿಕೊಂಡಿದ್ದೇವೆ. ನೀವು ಭಾರತದಲ್ಲಿ ನಿರ್ಮಿಸುವುದರಲ್ಲಿ ನಮಗೆ ಆಸಕ್ತಿ ಇಲ್ಲ. ಭಾರತ ತನ್ನನ್ನು ತಾನು ನೋಡಿಕೊಳ್ಳುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಐಫೋನ್‌ಗಳು ಮತ್ತು ಮ್ಯಾಕ್‌ಬುಕ್‌ಗಳನ್ನು ಪ್ರಪಂಚದಾದ್ಯಂತ ಬೇಡಿಕೆಯಲ್ಲಿರುವ ಆಪಲ್, ಅಮೆರಿಕದಲ್ಲಿ ತನ್ನ ಉತ್ಪಾದನೆಯನ್ನು ವಿಸ್ತರಿಸಲು ಸಜ್ಜಾಗಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಇದೇ ವೇಳೆ ಹೇಳಿದ್ದಾರೆ.

ಆಪಲ್ ಪ್ರಸ್ತುತ ಭಾರತದಲ್ಲಿ ಮೂರು ಸ್ಥಾವರಗಳನ್ನು ಹೊಂದಿದೆ, ಎರಡು ತಮಿಳುನಾಡಿನಲ್ಲಿ ಮತ್ತು ಒಂದು ಕರ್ನಾಟಕದಲ್ಲಿ. ಇವುಗಳಲ್ಲಿ ಒಂದನ್ನು ಫಾಕ್ಸ್‌ಕಾನ್ ನಿರ್ವಹಿಸುತ್ತದೆ ಮತ್ತು ಇನ್ನೆರಡು ಟಾಟಾ ಗ್ರೂಪ್ ನಿರ್ವಹಿಸುತ್ತದೆ. ಇನ್ನೂ ಎರಡು ಆಪಲ್ ಸ್ಥಾವರಗಳು ನಿರ್ಮಾಣ ಹಂತದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!