ಹೊಸದಿಗಂತ ವರದಿ ವಿಜಯಪುರ:
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಈ ಹಿಂದಿನ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರ್ಲೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದ್ದು, 2 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ.
ಅಧಿಕಾರಿ ರೇಣುಕಾ ಸಾತರ್ಲೆ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಖಚಿತ ಮಾಹಿತಿ ಆಧರಿಸಿ ಲೋಕಾಯುಕ್ತ ಪೊಲೀಸರು, ಮೇ 14, 2025 ರಂದು ನಗರದ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗೆ ಸಂಬಂಧಿಸಿದ ಮನೆ ಶೋಧದ ವಾರೆಂಟ್ ನೊಂದಿಗೆ, ಲೋಕಾ ಪೊಲೀಸರು ಇಲ್ಲಿನ ಚಾಣಕ್ಯ ನಗರದ ಮನೆ ಹಾಗೂ ಸೊಲ್ಲಾಪುರ ರಸ್ತೆ ಬಳಿಯ ಮನೆಗೆ ಏಕಕಾಲಕ್ಕೆ ಬೆಳಗ್ಗೆ ದಾಳಿ ನಡೆಸಿ, ದಾಖಲಾತಿ ಪರಿಶೀಲನೆ ನಡೆಸಿದರು.
ಈ ವೇಳೆ 10 ಲಕ್ಷ ನಗದು, ಚಿನ್ನ, ಬೆಳ್ಳಿಯ ಆಭರಣ, ವಾಹನ, ಬೆಲೆಬಾಳುವ ವಾಟ್, ತರಹೇವಾರಿ ಸನ್ ಗ್ಲಾಸ್ ಹಾಗೂ ಐಷಾರಾಮಿ ವಸ್ತುಗಳು ಸೇರಿದಂತೆ 2 ಕೋಟಿಗೂ ಹೆಚ್ಚಿನ ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದೆ.
ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಸುರೇಶ ರೆಡ್ಡಿ, ಪಿಎಸ್ ಐಗಳಾದ ಆನಂದ ಟಕ್ಕನವರ, ಆನಂದ ಡೋಣಿ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿದೆ