ಮೇಷ
ಕುಟುಂಬ ಸದಸ್ಯರ ಜತೆ ಸೌಹಾರ್ದದಿಂದ ನಡಕೊಳ್ಳಿ. ಅವರ ಭಾವನೆಗೆ ಗೌರವ ಕೊಡಿ. ವ್ಯವಹಾರದಲ್ಲಿ ತೊಡಕು, ಮಾನಸಿಕ ಒತ್ತಡ.
ವೃಷಭ
ಆರ್ಥಿಕವಾಗಿ ಸುದಿನ. ಧನಲಾಭ. ಆಸ್ತಿ ಖರೀದಿ ವ್ಯವಹಾರ ಸದ್ಯಕ್ಕೆ ಬೇಡ. ಅದು ದೀರ್ಘಾವಧಿಯಲ್ಲಿ ನಷ್ಟ ತರಬಹುದು.
ಮಿಥುನ
ಹಣದ ವ್ಯವಹಾರ ದಲ್ಲಿ ಗೊಂದಲ. ಸ್ಪಷ್ಟ ಚಿಂತನೆಯೊಂದಿಗೆ ಹೆಜ್ಜೆಯಿಡಿ. ಕೌಟುಂಬಿಕ ವಿಚಾರದಲ್ಲಿ ಚಾಡಿ ಮಾತಿಗೆ ಕಿವಿಗೊಡದಿರಿ.
ಕಟಕ
ಕೆಲಸ ಸುಗಮ. ವ್ಯವಹಾರದಲ್ಲಿ ಉನ್ನತಿ. ಹೊಸ ಕೆಲಸಕ್ಕೆ ಈಗಲೇ ಕೈಹಾಕದಿರಿ. ಅದರಿಂದ ಹೆಚ್ಚಿನ ಲಾಭವಿಲ್ಲ . ಕೌಟುಂಬಿಕ ನೆಮ್ಮದಿ.
ಸಿಂಹ
ಹೆಚ್ಚುವರಿ ಕೆಲಸದ ಹೊರೆ. ಈ ದಿನದ ನಿಮ್ಮ ಯೋಜನೆ ಏರುಪೇರು. ಒತ್ತಡದ ಮಧ್ಯೆಯೂ ಆತ್ಮೀಯರ ಒಡನಾಟವಿರಲಿ.
ಕನ್ಯಾ
ಕಾರ್ಯಕ್ಕೆ ಅಡ್ಡಿಗಳು. ಇದರಿಂದ ನಿಮ್ಮ ಯೋಜನೆಗೆ ಹಿನ್ನಡೆ. ಕೌಟುಂಬಿಕವಾಗಿ ನೆಮ್ಮದಿ. ಹಿತಮಿತಾಹಾರ ಆರೋಗ್ಯಕ್ಕೆ ಒಳ್ಳೆಯದು.
ತುಲಾ
ಹಿತಚಿಂತಕರ ಸಲಹೆಗೆ ಕಿವಿಗೊಡಿ. ವಿವೇಚಿಸದೆ ತಿರಸ್ಕರಿಸಬೇಡಿ. ವೃತ್ತಿಯಲ್ಲಿ ಸಣ್ಣ ವಿಷಯಕ್ಕೆ ಜಗಳ ಮಾಡದಿರಿ.
ವೃಶ್ಚಿಕ
ಮಾನಸಿಕ ಒತ್ತಡ ಹೆಚ್ಚಿಸುವ ಕಾರ್ಯಕ್ಕೆ ಕೈ ಹಾಕದಿರಿ. ಸಂಗಾತಿಯಿಂದ ಸಂತೋಷದ ಸುದ್ದಿ. ಆರ್ಥಿಕ ಉನ್ನತಿ.
ಧನು
ಏಕತಾನತೆಯ ಬದುಕಿನಲ್ಲಿ ಬದಲಾವಣೆ ಬಂದೀತು. ಹೊಸ ವ್ಯಕ್ತಿ ನವೋತ್ಸಾಹ ತುಂಬುವರು. ಆತ್ಮೀಯರ ಸಹಕಾರ.
ಮಕರ
ಆಪ್ತರ ಜತೆಗಿನ ಸಂಬಂಧ ಸುಧಾರಣೆಗೆ ಒತ್ತು ಕೊಡಿ. ನಿಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಲು ತಯಾರಾಗಿರಿ. ನೆಮ್ಮದಿ ಮುಖ್ಯ ಎಂದರಿಯಿರಿ.
ಕುಂಭ
ಕೌಟುಂಬಿಕ ನೆಮ್ಮದಿ ಕಲಕಲಿದೆ. ಅದಕ್ಕೆ ಕಾರಣರಾದವರ ಜತೆ ಕಠಿಣವಾಗಿ ವ್ಯವಹರಿಸಿ. ಮೃದು ನಿಲುವು ಸಲ್ಲದು. ಹಣದ ಚಿಂತೆ ಪರಿಹಾರ.
ಮೀನ
ಒಂದು ಸಮಸ್ಯೆ ಮುಗಿಯಿತೆಂದಾದಾಗ ಹೊಸ ಸಮಸ್ಯೆ. ಚಿಂತೆ ಮುಗಿಯದು. ಹನುಮನನ್ನು ಸ್ತುತಿಸಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ