ಮೌಂಟ್ ಎವರೆಸ್ಟ್ ಏರಿದ ಭಾರತೀಯ ಪರ್ವತಾರೋಹಿ ಇಳಿಯುವ ಹಾದಿಯಲ್ಲಿ ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೌಂಟ್ ಎವರೆಸ್ಟ್ಏರಿದ ಭಾರತೀಯ ಪರ್ವತಾರೋಹಿಯೊಬ್ಬರು ಇಳಿಯುವಾಗ ಮೃತಪಟ್ಟಿದ್ದಾರೆ ಎಂದು ಪರ್ವತಾರೋಹಣ ಆಯೋಜಕರು ಶುಕ್ರವಾರ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಸುಬ್ರತಾ ಘೋಷ್(45) ಮೃತ ಪರ್ವತಾರೋಹಿ. ಗುರುವಾರ 29,032 ಅಡಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ ನಂತರ ಹಿಂತಿರುಗುವಾಗ ಹಿಲರಿ ಸ್ಟೆಪ್ಸ್ಬಳಿ ಮೃತಪಟ್ಟಿದ್ದಾರೆ.

ಪರ್ವತ ಇಳಿಯುವಾಗ ಅವರಿಗೆ ಇದ್ದಕ್ಕಿದ್ದಂತೆ ಆಯಾಸ ಮತ್ತು ಹೈಟ್ ಫೋಬಿಯಾ ಕಾಣಿಸಿಕೊಂಡಿದೆ ಎಂದು ಪರ್ವತಾರೋಹಣ ಕಂಪನಿ ಸ್ನೋವಿ ಹರೈಸನ್ ಟ್ರೆಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬೋಧರಾಜ್ ಭಂಡಾರಿ ತಿಳಿಸಿದರು.

ಹೆಚ್ಚು ಆಯಾಸವಾದ ಬಳಿಕ ಘೋಷ್ ಕೆಳಗೆ ಇಳಿಯಲು ನಿರಾಕರಿಸಿದರು. ಅವರ ಮಾರ್ಗದರ್ಶಿ ಚಂಪಲ್ ತಮಾಂಗ್ ಅವರನ್ನು ಕೆಳಗೆ ಕರೆತರಲು ಪ್ರಯತ್ನಿಸಿದರು. ಆದರೆ ಘೋಷ್‌ರಿಂದ ಇಳಿಯಲು ಸಾಧ್ಯವಾಗಲಿಲ್ಲ. ತಮಾಂಗ್ ಗುರುವಾರ ರಾತ್ರಿ ಒಂಟಿಯಾಗಿ ಕ್ಯಾಂಪ್‌ಗೆ ಹಿಂತಿರುಗಿ ಮಾಹಿತಿ ನೀಡಿದರು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!