ಮೇಕಪ್ ಮಾಡುವಂತೆಯೇ ಅದನ್ನು ಸರಿಯಾದ ರೀತಿಯಲ್ಲಿ ತೆಗೆದುಹಾಕುವುದು ಕೂಡ ಬಹಳ ಮುಖ್ಯ. ದಿನದ ಕೊನೆಯಲ್ಲಿ ಮುಖವನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಚರ್ಮದ ಆರೋಗ್ಯಕ್ಕೆ ಬಹಳ ಅಗತ್ಯ. ಆದರೆ ಕೆಲವೊಮ್ಮೆ ಗೊತ್ತಿದ್ದೂ, ಗೊತ್ತಿಲ್ಲದೆಯೋ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತೇವೆ, ಇದರಿಂದ ಚರ್ಮದಲ್ಲಿ ಸಮಸ್ಯೆಗಳು ಉಂಟಾಗಬಹುದು.
ಮೇಕಪ್ ರಿಮೂವರ್ ಬಳಸದೇ ನೇರವಾಗಿ ತೊಳೆಯುವುದು:
ಕೆಲವರು ನೀರಿನಿಂದ ಅಥವಾ ಫೇಸ್ ವಾಷ್‌ನಿಂದ ನೇರವಾಗಿ ಮುಖ ತೊಳೆಯುತ್ತಾರೆ. ಆದರೆ ಇದು ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ. ಉತ್ತಮ ಮೇಕಪ್ ರಿಮೂವರ್ ಅಥವಾ ಕ್ಲೆನ್ಸಿಂಗ್ ಆಯಿಲ್ ಬಳಸುವುದು ಅಗತ್ಯ.
ಅತಿಯಾದ ಒತ್ತಡದಿಂದ ಮುಖ ತೊಳೆಯುವುದು:
ಬಲವಾಗಿ ಒತ್ತಿಸಿ ತೊಳೆದರೆ ಚರ್ಮಕ್ಕೆ ಹಾನಿಯಾಗಬಹುದು. ಸಾಫ್ಟ್ ಕಾಟನ್ ಪ್ಯಾಡ್ ಅಥವಾ ಕೈಯಿಂದ ನಿಧಾನವಾಗಿ ಉಜ್ಜಿ ಮೇಕಪ್ ತೆಗೆದುಹಾಕಿ.
ಕಣ್ಣುಗಳ ಮೇಕಪ್ ಕಡೆಗಣಿಸುವುದು:
ಕಣ್ಣಿನ ಸುತ್ತಲೂ ಚರ್ಮ ತುಂಬಾ ನಾಜೂಕು. ಕಣ್ಣುಗಳ ಮೇಕಪ್ (ಮಸ್ಕಾರಾ, ಐಲೈನರ್) ಸರಿಯಾಗಿ ತೆಗೆದುಹಾಕದೆ ಮಲಗುವುದು ಕಣ್ಣಿನ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ವಿಶೇಷವಾಗಿ ಕಣ್ಣಿಗಾಗಿ ವಿನ್ಯಾಸಗೊಳಿಸಿದ ರಿಮೂವರ್ ಬಳಸಬೇಕು.
ಕ್ಲೆನ್ಸರ್ ಅಥವಾ ರಿಮೂವರ್ ಅನ್ನು ತಕ್ಷಣ ತೊಳೆಯುವುದು:
ಕ್ಲೆನ್ಸರ್ ಅಥವಾ ಮೇಕಪ್ ರಿಮೂವರ್ ಅನ್ನು ಬಳಸಿದ ತಕ್ಷಣವೇ ತೊಳೆಯಬೇಡಿ. ಅದನ್ನು ಚರ್ಮದಲ್ಲಿ ಕೆಲವು ಕ್ಷಣ ಇಟ್ಟು, ಮೇಕಪ್ ಕರಗಿದ ನಂತರ ನಿಧಾನವಾಗಿ ತೊಳೆಯಬೇಕು.
ಮೇಕಪ್ ತೆಗೆದುಹಾಕಿದ ಮೇಲೆ ತ್ವರಿತವಾಗಿ ಮಾಯಶ್ಚರೈಸರ್ ಬಳಸದಿರುವುದು:
ಮೇಕಪ್ ತೆಗೆದುಹಾಕಿದ ನಂತರ ಚರ್ಮ ಒಣಗಬಹುದು. ಅದನ್ನು ತಕ್ಷಣವೇ ತಂಪಾದ ಟೋನರ್ ಅಥವಾ ಮಾಯಶ್ಚರೈಸರ್ ಉಪಯೋಗಿಸಿದರೆ ಒಳ್ಳೆಯದು.