ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿ ವಿರುದ್ಧ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ದೊಡ್ಡ ನಿರ್ಧಾರವೊಂದನ್ನು ಕೈಗೊಂಡಿದೆ.
ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಜಿಯೋಹಾಟ್‌ಸ್ಟಾರ್ ಸೇರಿದಂತೆ ಸ್ಟ್ರೀಮಿಂಗ್ (OTT Streaming) ಪ್ಲಾಟ್‌ಫಾರ್ಮ್‌ಗಳು ಟರ್ಕಿಶ್ ಸಿನಿಮಾಗಳನ್ನು (Turkish Cinema) ಬಹಿಷ್ಕರಿಸುವಂತೆ FWICE ಕರೆ ನೀಡಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಓವರ್-ದಿ-ಟಾಪ್ (OTT) ವೇದಿಕೆಗಳಲ್ಲಿ ಟರ್ಕಿಶ್ ಕಾರ್ಯಕ್ರಮಗಳ ನಿರಂತರ ಸ್ಟ್ರೀಮಿಂಗ್ ಮತ್ತು ಪ್ರಚಾರದ ಬಗ್ಗೆ ನಮ್ಮ ಗಂಭೀರ ಕಳವಳ ಮತ್ತು ಬಲವಾದ ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ.
ಭಾರತೀಯ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಟರ್ಕಿಶ್ ದೂರದರ್ಶನ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳ ಸ್ಟ್ರೀಮಿಂಗ್ ಅನ್ನು ಬಹಿಷ್ಕರಿಸಲು ಅಥವಾ ನಿರ್ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳುವುದನ್ನು ಪರಿಗಣಿಸುವಂತೆ FWICE ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಒತ್ತಾಯಿಸಿದೆ.