ಹೊಸದಿಗಂತ ಡಿಜಿಟಲ್ ಡೆಸ್ಕ್:
13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿ ಹೋಗಿ ಗರ್ಭಿಣಿಯಾಗಿ ಸದ್ಯ ಪೋಕ್ಸೊ ಕಾಯ್ದೆಯಡಿ ಬಂಧನದಲ್ಲಿರುವ 23 ವರ್ಷದ ಶಿಕ್ಷಕಿಯ ಗರ್ಭಪಾತಕ್ಕೆ ಗುಜರಾತ್ನ ಸೂರತ್ನ ವಿಶೇಷ ಪೋಕ್ಸೋ ನ್ಯಾಯಾಲಯ ಅನುಮತಿ ನೀಡಿದೆ.
ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಕೇಸ್ನಲ್ಲಿ ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದ್ದು, ಸದ್ಯ ಸೂರತ್ನ ಜೈಲಿನಲ್ಲಿದ್ದಾಳೆ.ಇದೀಗ ಕೋರ್ಟ್ ಆಕೆಯ ಮಾನಸಿಕ ತೊಂದರೆಗಳನ್ನು ಗಣನೆಗೆ ತೆಗೆದುಕೊಂಡು ಈ ತೀರ್ಪು ನೀಡಿದೆ.
ಸೂರತ್ ನಗರದ ಪುಣೆ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ನಲ್ಲಿ 13 ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿದೆ ಎಂದು ದೂರು ದಾಖಲಿಸಲಾಗಿತ್ತು. ಬಾಲಕನ ತಂದೆಯೇ ಈ ದೂರನ್ನು ನೀಡಿದ್ದರು. . ಈ ದೂರಿನಲ್ಲಿ ಶಾಲೆ ಮತ್ತು ಟ್ಯೂಷನ್ ಶಿಕ್ಷಕಿ ಮೇಲೆಯೇ ಬಾಲಕನ ತಂದೆ ಅನುಮಾನ ವ್ಯಕ್ತಪಡಿಸಿದ್ದರು. ದೂರಿನ ಅನ್ವಯ ಪೊಲೀಸರು ನಗರದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದರು. ಕೊನೆಗೆ ಏ. 30ರಂದು ಜೈಪುರದಿಂದ ಹಿಂದಿರುಗುತ್ತಿದ್ದಾಗ ಶಮ್ಲಾಜಿ ಗಡಿ ಬಳಿಯಲ್ಲಿ ಶಿಕ್ಷಕಿ ಮತ್ತು ಅಪ್ರಾಪ್ತ ಬಾಲಕನನ್ನು ಬಂಧಿಸಲಾಯ್ತು. ಇಬ್ಬರು ಬಸ್ನಲ್ಲಿದ್ದಾಗಲೇ ಪೊಲೀಸರ ಬಲೆಗೆ ಬಿದ್ದಿದ್ದರು.
ವಿದ್ಯಾರ್ಥಿಗೆ ಶಾಲೆಯಲ್ಲಿ ಮತ್ತು ಟ್ಯೂಷನ್ ತರಗತಿಯಲ್ಲಿ ಕಲಿಸುತ್ತಿದ್ದ ಶಿಕ್ಷಕಿ ಮತ್ತು ವಿದ್ಯಾರ್ಥಿ ಮಾಗೋಬ್ ಪ್ರದೇಶದ ಒಂದೇ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿದ್ದರು. ವಿದ್ಯಾರ್ಥಿಯ ಕುಟುಂಬವು ರಾಜಸ್ಥಾನ ಮೂಲದವರಾಗಿದ್ದರೆ, ಶಿಕ್ಷಕಿ ಮೆಹ್ಸಾನಾ ಮೂಲದವಳು. ಶಿಕ್ಷಕಿ ಕಳೆದ 3 ವರ್ಷಗಳಿಂದ ಆ ವಿದ್ಯಾರ್ಥಿಗೆ ಪಾಠ ಹೇಳಿಕೊಡುತ್ತಿದ್ದಳು.
ಬಂಧನದ ಬಳಿಕ ಶಿಕ್ಷಕಿಯನ್ನು ವಿಚಾರಣೆಗೊಳಿಪಡಿಸಿದಾಗ, ಬಾಲಕನೊಂದಿಗೆ ದೈಹಿಕ ಸಂಬಂಧ ಬೆಳೆಸಿರುವುದನ್ನು ಒಪ್ಪಿಕೊಂಡಿದ್ದಳು. ಶಿಕ್ಷಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆಕೆ 20 ವಾರ, 4 ದಿನದ ಗರ್ಭಿಣಿ ಎಂಬುದು ದೃಢವಾಗಿತ್ತು. ವಿದ್ಯಾರ್ಥಿ ಕಳೆದ 3 ವರ್ಷಗಳಿಂದ ಶಿಕ್ಷಕಿಯಿಂದ ಟ್ಯೂಷನ್ ತೆಗೆದುಕೊಳ್ಳುತ್ತಿದ್ದ.ಇದರಿಂದ ಇವರಿಬ್ಬರ ನಡುವೆ ಸಂಬಂಧ ಬೆಳೆದಿತ್ತು ಎನ್ನಲಾಗಿದೆ.