ಗರ್ಭಧಾರಣೆಯ ಸಮಯದಲ್ಲಿ ತಿನ್ನುವ ಆಹಾರವನ್ನು ಎಚ್ಚರಿಕೆಯಿಂದ ಆರಿಸಬೇಕು ಎಂಬುದು ಬಹುಪಾಲು ವೈದ್ಯರು ನೀಡುವ ಸಲಹೆ. ಅನಾನಸ್ (ಪೈನಾಪಲ್) ಒಂದು ರುಚಿಕರ ಮತ್ತು ಪೌಷ್ಟಿಕಹೊಂದಿದ ಹಣ್ಣದರೂ, ಗರ್ಭಿಣಿಯರಿಗೆ ಇದು ಸುರಕ್ಷಿತವೇ ಅಥವಾ ಅಲ್ಲವೇ ಎಂಬ ಪ್ರಶ್ನೆ ಕೇಳಲಾಗುತ್ತದೆ. ಹಾಗಾದ್ರೆ ಗರ್ಭಾವಸ್ಥೆಯಲ್ಲಿ ನಿಜಕ್ಕೂ ಅನಾನಸ್ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿಯೇ? ಈ ಬಗ್ಗೆ ತಿಳಿಯೋಣ ಬನ್ನಿ.
ಗರ್ಭಿಣಿಯರು ಅನಾನಸ್ ತಿನ್ನುವುದು ಸುರಕ್ಷಿತ ಎಂದು ಹೇಳಲಾಗುತ್ತದೆ. ಮತ್ತೆ ಕೆಲವರು ಇದು ಆರಂಭಿಕ ಗರ್ಭಪಾತಕ್ಕೆ ಕಾರಣವಾಗಬಹುದು ಎಂದು ಹೇಳುತ್ತಾರೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಕೆಲವರು ಗರ್ಭಿಣಿಯಾಗಿರುವಾಗ ಯಾವುದೇ ಆಹಾರವನ್ನು ಸೇವಿಸುವುದಾದರೂ, ಅದನ್ನು ಮಿತವಾಗಿ ಸೇವಿಸಿ, ಇದರಿಂದ ಯಾವುದೇ ಅಡ್ಡಪರಿಣಾಮಗಲಾಗುವುದಿಲ್ಲ ಎಂದು ಹೇಳುತ್ತಾರೆ.
ಅನಾನಸ್ ನಲ್ಲಿ ಹೆಚ್ಚಿನ ಅಸಿಟಿಕ್ ಆಮ್ಲದ ಅಂಶವು ಭ್ರೂಣಕ್ಕೆ ಹಾನಿ ಮಾಡುತ್ತದೆ ಎಂದು ಹೇಳಾಗುತ್ತದೆ. ಇದು ಆಮ್ಲ ಹಿಮ್ಮುಖ ಹರಿವು, ಗರ್ಭಪಾತದ ಅಪಾಯ, ಸಕ್ಕರೆ ಮಟ್ಟ ಹೆಚ್ಚಳ, ತೂಕ ಹೆಚ್ಚಾಗುವಿಕೆ ಮತ್ತು ಅತಿಸಾರಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಒಂದು ಕಪ್ ಅನಾನಸ್ ಗರ್ಭಿಣಿಯರ ದೈನಂದಿನ ವಿಟಮಿನ್ ಸಿ ಅವಶ್ಯಕತೆಯ 100% ಅನ್ನು ಪೂರೈಸುತ್ತದೆ. ಹೆಚ್ಚುವರಿಯಾಗಿ, ಇದು ಫೋಲೇಟ್, ಕಬ್ಬಿಣ, ಮ್ಯಾಂಗನೀಸ್, ವಿಟಮಿನ್ ಬಿ6 ಮತ್ತು ಸಿ ಅನ್ನು ಒದಗಿಸುತ್ತದೆ.
ಆದ್ದರಿಂದ, ಗರ್ಭಿಣಿಯರು ಅನಾನಸ್ ಅನ್ನು ಮಿತವಾಗಿ ಅಥವಾ ವೈದ್ಯರ ಸಲಹೆಯ ಮೇರೆಗೆ ತಿನ್ನುವುದು ಉತ್ತಮ.