ಅಪರೇಷನ್ ಅಭ್ಯಾಸ್ ಅಣುಕು ಪ್ರದರ್ಶನ: ಮೇ 19 ರಂದು ಕಲಬುರಗಿ ನಗರ ಬ್ಲ್ಯಾಕ್ ಔಟ್

ಹೊಸದಿಗಂತ ವರದಿ, ಕಲಬುರಗಿ:

“ಅಪರೇಷನ್ ಅಭ್ಯಾಸ್” ನಾಗರಿಕ ರಕ್ಷಣಾ ಕಾರ್ಯಚರಣೆಯ ಅಣುಕು ಪ್ರದರ್ಶನದ ಭಾಗವಾಗಿ ಕೇಂದ್ರ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮೇ 19 ರಂದು ಸೋಮವಾರ ರಾತ್ರಿ 8 ಗಂಟೆಯಿಂದ 8.10 ನಿಮಿಷದವರೆಗೆ (ಹತ್ತು ನಿಮಿಷಗಳ ಕಾಲ) ಕಲಬುರಗಿ ನಗರವನ್ನು ಸಂಪೂರ್ಣವಾಗಿ ಬ್ಲಾಕ್ ಔಟ್ (BLACK OUT) ನ್ನು ಮಾಡಲು ನಿರ್ಧರಿಸಲಾಗಿದೆ.

ಆದ್ದರಿಂದ ಸಾರ್ವಜನಿಕರು ತುರ್ತು ಸೇವೆಗಳನ್ನು ಹೊರತುಪಡಿಸಿ ತಮ್ಮ ಮನೆಯಲ್ಲಿರುವ ಇನ್ವರ್ಟರ್ (Invertor) ಗಳನ್ನು ಸ್ಥಗಿತಗೊಳಿಸಿ ಮಾಕ್ ಡ್ರಿಲ್ (MOCK DRILL) ನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು (ವಿ) ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!