ಹೊಸದಿಗಂತ ಹಾಸನ :
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡೆಮ್ಮೆಗಳ ಹಾವಳಿ ಮಿತಿ ಮೀರಿದ್ದು ತಾಲುಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಹಿಂಡು ಹಿಂಡಾಗಿ ಬೆಳೆ ನಾಶ ಮಾಡ್ತಿರೊ ಕಾಟಿ ಗಳ ಹಾವಳಿಯಿಂದ ಜನರು ಆತಂಕಗೊಂಡಿದ್ದಾರೆ.
ಹಾಸನದಲ್ಲಿ ಕಾಡಾನೆಗಳ ಹಾವಳಿ ಕೊಂಚ ಕ್ಷೀಣಿಸಿದ ಬೆನ್ನಲ್ಲೇ ಇದೀಗ ಕಾಡೆಮ್ಮೆಗಳ ಉಪಟಳ ಹೆಚ್ಚಾಗಿದ್ದು ಒಂದೆಡೆ ಬೆಳೆ ನಾಶದಿಂದ ಜನ ಕಂಗಾಲಾಗಿದ್ದರೆ ಇನ್ನೊಂದೆಡೆ ಅವುಗಳ ಧಾಳಿಯ ಭಯದಲ್ಲಿ ಆತಂಕಗೊಂಡಿದ್ದಾರೆ.
ಒಂದು ವಾರದ ಹಿಂದೆ ವೃದ್ದನ ಕಾಡೆಮ್ಮೆ ಧಾಳಿ ಮಾಡಿ ಜೀವ್ ತೆಗೆದಿತ್ತು. ಇದೀಗ ಮತ್ತೆ ಹಿಂಡು ಹಿಂಡಾಗಿ ಕಾಡೆಮ್ಮೆ ಕಾಣಿಸಿಕೊಂಡಿದ್ದು ಒಂಟಿಯಾಗಿ ಓಡಾಡಲು ಜನ ಭಯ ಪಡುತ್ತಿದ್ದಾರೆ . ಸಂಜೆ ಯಾಗುತ್ತಲೇ ರೈತರ ಬೆಳೆಗಳತ್ತ ಧಾವಿಸಿ ಬರ್ತಿರೊ ಕಾಡೆಮ್ಮೆಗಳ ಹಾವಳಿ ತಡೆಗೆ ಕ್ರಮ ವಹಿಸುವಂತೆ ಅರಣ್ಯ ಇಲಾಖೆಗೆ ಮಲೆನಾಡಿಗರು ಆಗ್ರಹಿಸಿದ್ದಾರೆ.