ಸೆಲೆಬ್ರಿಟಿಗಳಿಂದ ದೇಶಭಕ್ತಿ ನಿರೀಕ್ಷಿಸಬೇಡಿ.. ಯಾವ ವಿಷ್ಯಕ್ಕೆ ಹೀಗಂದ್ರು ಪವನ್ ಕಲ್ಯಾಣ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್ ಸಿಂದೂರದ ಬಗ್ಗೆ ಯಾವ ಸೆಲೆಬ್ರಿಟಿಗಳು ಮಾತನಾಡುತ್ತಿಲ್ಲ ಎಂದು ಆಂಧ್ರಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, “ಸೆಲೆಬ್ರಿಟಿಗಳು ಮಾತಾನಾಡುತ್ತಿಲ್ಲ, ಹೀರೋಗಳು ಮಾತಾನಾಡುತ್ತಿಲ್ಲ. ಬಾಲಿವುಡ್ ಹೀರೋಗಳು ಮಾತಾನಾಡುತ್ತಿಲ್ಲ ಅಂದರೆ ಅವರು ಮನರಂಜನೆ ಕೊಡುವವರು, ಒಳ್ಳೆಯ ಪ್ರದರ್ಶನ ಕೊಡುವವರು ಅಷ್ಟೇ. ಅವರು ಯಾರು ದೇಶವನ್ನು ನಡೆಸುವ ವ್ಯಕ್ತಿಗಳಲ್ಲ” ಎಂದು ಹೇಳಿದ್ದಾರೆ.

ದೇಶಭಕ್ತಿ ಎಂದರೆ ಮುರಳಿ ನಾಯ್ಕ್‌ನಂಥವರು. ಮುರಳಿ ನಾಯ್ಕ್ 24 ವರ್ಷದ ಯುವಕ. ದೇಶಕ್ಕೋಸ್ಕರ ಸಿನಿಮಾ ನೋಡಲಿಲ್ಲ, ಸಿನಿಮಾ ಬಗ್ಗೆ ಹೇಳಲಿಲ್ಲ. ಆದರೆ ಭಾರತ್ ಮಾತಾ ಕೀ ಜೈ ಹೇಳಿದ. ಯಾವಾಗ ಭಾರತ ಮಾತೆಯನ್ನು ಪ್ರೀತಿಸುತ್ತಾರೋ ಅವರು ನಿಜವಾದ ದೇಶ ಪ್ರಜೆಗಳು ಎಂದು ಯೋಧ ಮುರಳಿ ಶೌರ್ಯವನ್ನು ಶ್ಲಾಘಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!