ಇಂದಿರಾ ಕ್ಯಾಂಟೀನ್‌ನಲ್ಲಿ 7 ಕೋಟಿ ಅವ್ಯವಹಾರ: ಬಿಬಿಎಂಪಿ ಉಪ ಆರೋಗ್ಯಾಧಿಕಾರಿ ಅಮಾನತು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ದಕ್ಷಿಣ ವಲಯದ ಇಂದಿರಾ ಕ್ಯಾಂಟೀನ್‌ನಲ್ಲಿ 7 ಕೋಟಿ ರೂ.ಗಳ ಅವ್ಯವಹಾರ ನಡೆದಿದ್ದು, ಈ ಹಿನ್ನೆಲೆ ಬಿಬಿಎಂಪಿ ವಲಯದ ಉಪ ಆರೋಗ್ಯಾಧಿಕಾರಿ ಡಾ.ಕಲ್ಪನಾ ಪಿ. ಅವರನ್ನು ಅಮಾನತುಗೊಳಿಸಲಾಗಿದೆ.

ಪಾಲಿಕೆಯ ದಕ್ಷಿಣ ವಲಯಕ್ಕೆ ಆಹಾರ ಪೂರೈಕ ಮಾಡಿದ ಚೆಫ್ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಬಿಲ್ ಪಾವತಿಯಲ್ಲಿ 7 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ನಡೆದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಆರೋಗ್ಯಾಧಿಕಾರಿಯಾಗಿದ್ದ ಡಾ.ಕಲ್ಪನಾ ಪಿ ಅವರು ಆರ್ಡರ್ ಗಳನ್ನು ಪರಿಶೀಲಿಸದೆ ಅಂದಾಜು ರೂ. 9.72 ಕೋಟಿ ಪಾವತಿಸಿದ್ದಾರೆ. ಆದರೆ ಅದಕ್ಕೆ ವಾಸ್ತವವಾಗಿ ಪಾವತಿಸಬೇಕಾದದ್ದು ಕೇವಲ ರೂ. 2.27 ಕೋಟಿ ಮಾತ್ರ,. ಇದರಿಂದ ಹೆಚ್ಚುವರಿಯಾಗಿ ಸುಮಾರು 7 ಕೋಟಿ ರೂ. ಪಾವತಿಸಿದ್ದಕ್ಕಾಗಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಇದೀಗ ಮೊತ್ತದ ವಸೂಲಾತಿಗೆ ನೋಟಿಸ್ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಲಿಕೆ ಆಡಳಿತ ಈ ಪ್ರಕರಣದ ಕೂಲಂಕಷ ತನಿಖೆ ನಡೆಸುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!