ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಲ್ಬೇನಿಯಾದ ರಾಜಧಾನಿ ಟಿರಾನಾದಲ್ಲಿ ಆಯೋಜಿಸಲಾಗಿದ್ದ ಯುರೋಪಿಯನ್ ರಾಜಕೀಯ ಸಮುದಾಯದ ಶೃಂಗಸಭೆಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆಗಮಿಸಿದ್ದು, ಈ ವೇಳೆ ಅಲ್ಬೇನಿಯಾ ಪ್ರಧಾನಿ ಎಡಿ ರಾಮ ಮಂಡಿಯೂರಿ ಕೈ ಮುಗಿದು ನಮಸ್ಕರಿಸುವ ಮೂಲಕ ತಮ್ಮ ದೇಶಕ್ಕೆ ಬರಮಾಡಿಕೊಂಡಿದ್ದಾರೆ.
ಈ ವಿಡಿಯೋಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
@joeymannarinoUS ಹೆಸರಿನ ಖಾತೆಯಲ್ಲಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿಯವರನ್ನು ಅಲ್ಬೇನಿಯಾದ ಪ್ರಧಾನಿ ಮಂಡಿಯೂರಿ, ಕೈ ಮುಗಿದು ಸ್ವಾಗತಿಸಿದ ಕ್ಷಣದ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಮಳೆಯ ನಡುವೆ ಅಲ್ಬೇನಿಯಾದ ಪ್ರಧಾನಿ ಎಡಿ ರಾಮಾ ಅವರು ನೀಲಿ ಬಣ್ಣದ ಕೊಡೆಯನ್ನು ಪಕ್ಕದಲ್ಲಿಟ್ಟು, ಇಟಾಲಿಯನ್ ಪ್ರಧಾನಿ ಮೆಲೋನಿ ಬರುತ್ತಿದ್ದಂತೆ ರೆಡ್ ಕಾರ್ಪೆಟ್ ಮೇಲೆ ಮಂಡಿಯೂರಿ ಕುಳಿತಿದ್ದಾರೆ.
ಇಟಲಿ ಪ್ರಧಾನಿ ಮೆಲೋನಿಯ ತಮ್ಮ ಹತ್ತಿರ ಬರುತ್ತಿದ್ದಂತೆ, ಪ್ರಧಾನಿ ಎಡಿ ರಾಮ ತನ್ನ ಎರಡು ಕೈಗಳನ್ನು ಜೋಡಿಸಿ ಕೈ ಮುಗಿದು ನಮಸ್ಕರಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಸುಂದರಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮತ್ತೊಬ್ಬರು, ಈ ರೀತಿ ಸ್ವಾಗತಕ್ಕೆ ಅವಳು ಅರ್ಹಳು ಎಂದು ಕಾಮೆಂಟ್ ಮಾಡಿದ್ದಾರೆ.