Smile Please | ಪ್ರತಿದಿನ ನಗೋದ್ರಿಂದ ಇಷ್ಟೆಲ್ಲಾ ಪ್ರಯೋಜನ ಇದೆ!

ಇಂದಿಗೂ ನಗು ಒಂದು ಸಾಮಾನ್ಯ ಕ್ರಿಯೆಯಂತಿದ್ದರೂ, ಅದರ ಪರಿಣಾಮಗಳು ಅತ್ಯಂತ ಶಕ್ತಿಶಾಲಿಯಾಗಿದೆ. ಪ್ರತಿದಿನವೂ ನಗುವುದು ನಮ್ಮ ಮಾನಸಿಕ ಹಾಗೂ ಶಾರೀರಿಕ ಆರೋಗ್ಯಕ್ಕೆ ಸಾಕಷ್ಟು ಲಾಭ ನೀಡುತ್ತದೆ. ನಿತ್ಯ ನಗುವುದರಿಂದ ಉಂಟಾಗುವ ಪ್ರಮುಖ ಲಾಭಗಳನ್ನು ಇವತ್ತು ನೋಡೋಣ.

ಮಾನಸಿಕ ಒತ್ತಡ ಕಡಿಮೆಯಾಗುತ್ತದೆ:
ನಗುವಾಗ ದೇಹದಲ್ಲಿ ಎಂಡಾರ್ಫಿನ್ ಎಂಬ ಹಾರ್ಮೋನ್ ಬಿಡುಗಡೆ ಆಗುತ್ತದೆ, ಇದು ಸಂತೋಷದ ಭಾವನೆ ನೀಡುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಉತ್ತಮ ಒತ್ತಡ ಮತ್ತು ಕೆಟ್ಟ ಒತ್ತಡ: ಪ್ರಮುಖ ವ್ಯತ್ಯಾಸಗಳು ಮತ್ತು ಪರಿಣಾಮಗಳು

ಹೃದಯ ಆರೋಗ್ಯ ಉತ್ತಮವಾಗುತ್ತದೆ:
ನಗು ರಕ್ತದ ಪ್ರವಾಹವನ್ನು ಸುಧಾರಿಸುತ್ತದೆ ಮತ್ತು ರಕ್ತದ ಒತ್ತಡವನ್ನು ನಿಯಂತ್ರಿಸುತ್ತೆ. ಇದರಿಂದ ಹೃದಯದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

A Healthy Smile Helps Your Heart Beverly | Beverly Farms Dental

ಮಾಜದಲ್ಲಿ ಉತ್ತಮ ಸಂಬಂಧ ನಿರ್ಮಾಣ:
ನಗುವ ಮುಖವು ಇತರರ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ಇದರಿಂದ ಸ್ನೇಹ, ಸಹಕಾರ ಮತ್ತು ವಿಶ್ವಾಸ ಇತ್ಯಾದಿ ಗುಣಗಳು ಬೆಳೆದು ಉತ್ತಮ ಮಾನವ ಸಂಬಂಧಗಳನ್ನು ನಿರ್ಮಿಸಬಹುದು.

36,900+ Indian Family Smiling Stock Photos, Pictures & Royalty-Free Images - iStock

ತೀವ್ರ ನೋವಿಗೆ ತಾತ್ಕಾಲಿಕ ಪರಿಹಾರ:
ನಗು ನೋವಿನ ಪ್ರಮಾಣವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಬಹುದು. ನಗುವು ಪ್ರಾಕೃತಿಕ ಪೈನ್ ಕಿಲ್ಲರ್ ಆಗಿ ಕಾರ್ಯನಿರ್ವಹಿಸುವ ಎಂಡಾರ್ಫಿನ್ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ.

ಆತ್ಮವಿಶ್ವಾಸ ಹೆಚ್ಚಿಸುತ್ತದೆ:
ನಗು ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಗುವ ಮುಖದಿಂದ ನಾವು ಇನ್ನಷ್ಟು ಧೈರ್ಯವಾಗಿ ಮತ್ತು ಉತ್ಸಾಹದಿಂದ ಜೀವನವನ್ನು ನಡೆಸಬಹುದು.

Self-confidence is the key to success • Swadhyay

ನಿತ್ಯ ನಗುವುದು ಸಣ್ಣ ಸಾಮಾನ್ಯವಾಗಿ ಕಂಡರೂ, ಅದು ನಮ್ಮ ದೈನಂದಿನ ಜೀವನದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಆದ್ದರಿಂದ, ಪ್ರತಿದಿನ ನಗುವ ಮೂಲಕ ಆರೋಗ್ಯವಂತ ಮತ್ತು ಸಂತೋಷಭರಿತ ಜೀವನದತ್ತ ಹೆಜ್ಜೆ ಇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here