ಮಾನವ ಸಂಬಂಧಗಳು ಪರಸ್ಪರ ಗೌರವ, ನಂಬಿಕೆ, ಪ್ರೀತಿಯ ಮೇಲೆ ನಿಂತಿರಬೇಕು. ಆದರೆ ಕೆಲವು ಸಂಬಂಧಗಳು ಪ್ರೀತಿ -ಆತ್ಮೀಯತೆಯನ್ನು ಕಳೆದುಕೊಂಡು, ಮಾನಸಿಕ ಮತ್ತು ಶಾರೀರಿಕವಾಗಿ ಹಾನಿಕಾರಕವಾಗಬಹುದು. ಇವುಗಳನ್ನು ಗುರುತಿಸುವುದು ಆರೋಗ್ಯಕರ ಬದುಕಿಗೆ ಬಹಳ ಮುಖ್ಯ.
ನಿಯಂತ್ರಣ ತೋರುವ ವರ್ತನೆ
ಸಂಗಾತಿ ಯಾವಾಗಲೂ ನಿಮ್ಮ ತೀರ್ಮಾನಗಳನ್ನು ನಿಯಂತ್ರಿಸಲು ಯತ್ನಿಸುತ್ತಿದ್ದರೆ – ಸ್ನೇಹಿತರನ್ನು ಭೇಟಿಯಾಗುವುದು, ಬಟ್ಟೆ ಆಯ್ಕೆ, ಕೆಲಸ ಮುಂತಾದ ವರ್ತನೆ ನಿಮ್ಮ ಸ್ವಾತಂತ್ರ್ಯವನ್ನು ಕಿತ್ತೆಸೆದು, ಅತ್ಮವಿಶ್ವಾಸ ಕುಂಠಿತಗೊಳಿಸುತ್ತದೆ.
ನಿರಂತರ ಟೀಕೆ ಮತ್ತು ಕೀಳರಿಮೆ
ಸಂಗಾತಿಯಿಂದ ನೀವು ಯಾವಾಗಲೂ ಟೀಕೆ, ಅಪಮಾನ ಅಥವಾ ಕೀಳುಮಟ್ಟದ ಮಾತುಗಳನ್ನು ಕೇಳುತ್ತಿದ್ದರೆ, ಅದು ಸಂಬಂಧದ ಗುಣಮಟ್ಟವನ್ನು ತೋರಿಸುತ್ತದೆ. ಇದು ನಿಧಾನವಾಗಿ ನಿಮ್ಮ ಆತ್ಮಸಂಕಲ್ಪವನ್ನು ನಾಶಮಾಡುತ್ತದೆ ಮತ್ತು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.
ನಂಬಿಕೆ ಕೊರತೆ
ಅವಿಶ್ವಾಸ, ಸಂದೇಹ ಇರುವುದು ಸಂಬಂಧದಲ್ಲಿ ನಂಬಿಕೆ ಇಲ್ಲದಿರೋದನ್ನು ಸೂಚಿಸುತ್ತದೆ. ನಂಬಿಕೆಯಿಲ್ಲದ ಸಂಬಂಧದಲ್ಲಿ ಭದ್ರತೆ ಇಲ್ಲದ ಕಾರಣ, ಎಲ್ಲಿ ಹಾಳಾಗುತ್ತದೆಯೋ ಎಂದು ಯಾವಾಗಲೂ ಆತಂಕ ಇರುತ್ತದೆ.
ಸಂವಹನದ ಕೊರತೆ
ನೀವು ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲಾಗದ ಸಂಬಂಧವು ಆರೋಗ್ಯಕರವಲ್ಲ. ಸಂವಹನ ಇಲ್ಲದಿದ್ದರೆ, ಗೊಂದಲ, ತಪ್ಪು ಅರ್ಥಮಾಡಿಕೊಳ್ಳುವುದು ಹೆಚ್ಚಾಗಿ ನಡೆಯುತ್ತದೆ.
ಭಯದ ವಾತಾವರಣ
ಸಂಗಾತಿಯಿಂದ ಯಾವಾಗಲೂ ಕೋಪ, ಬೆದರಿಕೆ ಭಯ ಅನುಭವಿಸುತ್ತಿದ್ದರೆ, ನೀವು ಭಯದಿಂದ ಬದುಕುತ್ತಿದ್ದೀರಿ. ಭಯದಿಂದ ಕೂಡಿದ ಸಂಬಂಧ ನಿಮ್ಮ ಮಾನಸಿಕ ಶಾಂತಿಯನ್ನೇ ಹಾಳುಮಾಡುತ್ತದೆ.