ಮೇಷ
ದಿನವಿಡೀ ಯಾವುದಾದರೂ ಕಾರ್ಯದಲ್ಲಿ ವ್ಯಸ್ತರು. ಹೆಚ್ಚು ಹೊಣೆಗಾರಿಕೆ, ಅಧಿಕ ಒತ್ತಡ. ಆಪ್ತ ಬಂಧುಗಳ ಭೇಟಿ.
ವೃಷಭ
ಅತಿಯಾದ ಸುತ್ತಾಟ. ಆರೋಗ್ಯದ ಮೇಲೆ ಇದು ಪರಿಣಾಮ ಬೀರೀತು. ಕುಟುಂಬ ಸದಸ್ಯರ ಬೇಸರ ನೀಗಲು ಗಮನ ಕೊಡಿ.
ಮಿಥುನ
ಬಂಧುಬಳಗದ ಜತೆ ಇಂದು ಆತ್ಮೀಯ ಕಾಲಕ್ಷೇಪ. ಬಂಧುತ್ವವೊಂದು ಗಾಢಗೊಳ್ಳಲಿದೆ. ಆರೋಗ್ಯ ಸಮಸ್ಯೆ ನಿವಾರಿಸಿಕೊಳ್ಳಿ.
ಕಟಕ
ಹಿರಿಯರ ಜತೆ ವಾಗ್ವಾದಕ್ಕೆ ಇಳಿಯದಿರಿ. ಪರಿಸ್ಥಿತಿ ನಿಮಗೆ ಪ್ರತಿಕೂಲ ಆದೀತು. ಸಂಧಾನ, ಹೊಂದಾಣಿಕೆಯಿಂದ ನಿಮ್ಮ ದಾರಿ ಸುಗಮ.
ಸಿಂಹ
ದೃಢ ಮನಸ್ಸು ತೋರಿ. ಅದರಿಂದ ನಿಮ್ಮ ಸಮಸ್ಯೆ ಪರಿಹರಿಸಲು ಸಾಧ್ಯ. ಸಂಧಾನದ ಹಾದಿ ನಿಮಗಿಂದು ಫಲ ನೀಡಲಾರದು.
ಕನ್ಯಾ
ಬಂಧುಭೇಟಿ. ಆತ್ಮೀಯರ ಜತೆಗಿನ ವೈಮನಸ್ಸು ಪರಿಹಾರ. ಸೌಹಾರ್ದ ವೃದ್ಧಿ. ಹಿರಿಯರಿಗೆ ಸಂಧಿನೋವು, ಕಾಲು ನೋವು ಸಂಭವ.
ತುಲಾ
ನಿಮ್ಮದಲ್ಲದ ವಿಚಾರದಲ್ಲಿ ಹಸ್ತಕ್ಷೇಪ ನಡೆಸಬೇಡಿ. ಇತರರ ವಿರೋಧ ಕಟ್ಟಿಕೊಳ್ಳ ಬೇಕಾದೀತು. ಹಣದ ವ್ಯವಹಾರದಲ್ಲಿ ಲಾಭ.
ವೃಶ್ಚಿಕ
ಕೌಟುಂಬಿಕ ಅಥವಾ ಹಣಕಾಸು ಸಮಸ್ಯೆಯನ್ನು ಆಪ್ತರ ಜತೆ ಹಂಚಿಕೊಳ್ಳಿ. ಪರಿಹಾರ ದೊರಕೀತು.ಆರೋಗ್ಯ ಸಮಸ್ಯೆ ಪರಿಹಾರ ಕಾಣಲಿದೆ.
ಧನು
ನಿಮ್ಮ ಸುತ್ತಲಿನ ಬದಲಾವಣೆ ಬಗ್ಗೆ ಎಚ್ಚರದಿಂದಿರಿ. ಅದು ನಿಮ್ಮ ಮೇಲೂ ಪರಿಣಾಮ ಬೀರಲಿದೆ. ವೃಥಾ ಸಿಟ್ಟು ಪ್ರದರ್ಶಿಸಬೇಡಿ.
ಮಕರ
ಖಾಸಗಿ ಬದುಕಲ್ಲಿ ಅಸಹನೀಯ ಬೆಳವಣಿಗೆ. ವ್ಯವಹಾರದಲ್ಲಿ ಹಣದ ಕೊರತೆ. ಸಂಯಮ ಪ್ರದರ್ಶಿಸಿ. ಆಹಾರದಿಂದ ಹೊಟ್ಟೆ ಕೆಡುವ ಸಂಭವ.
ಕುಂಭ
ವೃತ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಎಚ್ಚರದಿಂದ ವ್ಯವಹರಿಸಿ. ಇತರರ ತಪ್ಪಿಗೆ ನೀವು ಹೊಣೆಗಾರರಾಗದಿರಿ. ವ್ಯವಹಾರದಲ್ಲಿ ಸಂಘರ್ಷ.
ಮೀನ
ಸಂಗಾತಿ ಜತೆಗೆ, ಸ್ನೇಹಿತರ ಜತೆಗೆ ಇಂದು ಉತ್ತಮ ಹೊಂದಾಣಿಕೆ. ಅಪಪ್ರಚಾರದ ಕುರಿತು ಎಚ್ಚರವಿರಲಿ. ಆರ್ಥಿಕವಾಗಿ ಉನ್ನತಿ.