ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇ 8ರಂದು ದಿಢೀರನೆ ರದ್ದಾಗಿದ್ದ IPL ಪಂದ್ಯಾವಳಿಗಳು ನಿನ್ನೆ ಪುನರ್ ಆರಂಭಗೊಂಡಿದ್ದು, ಆದ್ರೆ ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯ ಪ್ರಾರಂಭವಾಗೋ ಮುಂಚೆನೇ ಮಳೆಯಿಂದಾಗಿ ರದ್ದಾಯಿತು. ಆ ಮೂಲಕ RCB ಹಾಗೂ KKR ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡವು.
ಇತ್ತ ಪಂದ್ಯ ರದ್ದಾದ್ರು ಕೂಡ RCB ತಂಡ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲು ಹಾಗೂ ಒಂದು ಪಂದ್ಯ ರದ್ದಾಗುವ ಮೂಲಕ 17 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿತು.
ಕೆಕೆಆರ್ ಆಡಿರುವ 13 ಪಂದ್ಯಗಳಲ್ಲಿ 5 ಗೆಲುವು, 7 ಸೋಲು ಹಾಗೂ 2 ಪಂದ್ಯಗಳು ರದ್ದಾದ ಹಿನ್ನೆಲೆ ಟೂರ್ನಿಯಲ್ಲಿ 12 ಅಂಕ ಹೊಂದಿದೆ. ಆ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 6 ನೇ ಸ್ಥಾನದಲ್ಲಿದೆ. ಆದ್ರೂ ಕೂಡ ತಂಡ ಪ್ಲೇ ಆಫ್ ತಲುಪುವುದು ಅಸಾಧ್ಯವಾಗಿತ್ತು. ಆದರೆ ಪಂದ್ಯ ರದ್ದಾಗಿದ್ದರಿಂದ ಕೆಕೆಆರ್ ಟೂರ್ನಿಯಿಂದ ಹೊರಬಿದ್ದಿದೆ.