ಹೊಸದಿಗಂತ ವರದಿ ಕಲಬುರಗಿ:
ದೇಶದ ಸೈನಿಕರಿಗೆ ಧೈರ್ಯ ತುಂಬುವ ಹಾಗೂ ಪೆಹಲ್ಗಾಂ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯಲ್ಲಿ ರಾಷ್ಟ್ರ ರಕ್ಷಣೆಗಾಗಿ ನಾಗರೀಕರು ಎಂಬ ಘೋಷಣೆಯೊಂದಿಗೆ ಸಾವಿರಾರು ದೇಶ ಭಕ್ತರ ಜೈ ಘೋಷಣೆಗಳ ಮಧ್ಯೆ 100 ಮೀಟರ್ ಅಳತೆಯ ತ್ರಿವರ್ಣ ಧ್ವಜದ ಬೃಹತ್ ತಿರಂಗಾ ಯಾತ್ರೆ ಶನಿವಾರ ಸಂಜೆ ಅದ್ಧೂರಿಯಾಗಿ ನಗರದಲ್ಲಿ ಜರುಗಿತು.
ರಾಷ್ಟ್ರ ನಿರ್ಮಾಣಕ್ಕಾಗಿ ನಾಗರೀಕರು ಘೋಷ ವಾಕ್ಯದಡಿ,ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಬೃಹತ್ ತಿರಂಗಾ ಯಾತ್ರೆ ನಡೆಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಕಲಬುರಗಿ ನಗರ ಸಾಕ್ಷಿಯಾಯಿತು.