ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಥಗ್ ಲೈಫ್’ ನ ಟ್ರೇಲರ್ ಮೇ 17 ರಂದು ಬಿಡುಗಡೆಯಾಯಿತು. ಕಮಲ್ ಹಾಸನ್ ಮತ್ತು ಮಣಿರತ್ನಂ 36 ವರ್ಷಗಳ ನಂತರ ಜೊತೆಯಾಗಿರುವ ಈ ಚಿತ್ರದಲ್ಲಿ ಸಿಂಬು, ತ್ರಿಷಾ, ಜೋಜು ಜಾರ್ಜ್, ಐಶ್ವರ್ಯ ಲಕ್ಷ್ಮಿ, ಗೌತಮ್ ಕಾರ್ತಿಕ್ ಮತ್ತು ಬಾಲಿವುಡ್ ನಟ ಅಲಿ ಫಜಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಸಿನಿಮಾದ ಟ್ರೇಲರ್ ನೋಡಿದ ಪ್ರೇಕ್ಷಕರು ಸ್ವಲ್ಪ ಇರುಸುಮುರುಸಾಗಿರುವಂತೆ ಕಾಣುತ್ತಿದೆ. ಅದಕ್ಕೆ ಕಾರಣ 70 ವರ್ಷದ ಹಾಸನ್ ಮತ್ತು 40 ವರ್ಷದ ನಟಿ ಅಭಿರಾಮಿ ನಡುವಿನ ಲಿಪ್ ಲಾಕ್ ದೃಶ್ಯ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ.
ಟ್ರೇಲರ್‌ನಲ್ಲಿ, ಅಭಿರಾಮಿಯ ಪಾತ್ರವು ಕಮಲ್ ಹಾಸನ್ ಅವರ ಎದೆಯ ಮೇಲೆ ಮಲಗಿ, ಪ್ರೀತಿ ಮಾಡುವುದು ಕಾಣಬಹುದು. ಮುಂದಿನ ದೃಶ್ಯದಲ್ಲಿ, ಹಾಸನ್ ನಟಿಯನ್ನು ಹತ್ತಿರಕ್ಕೆ ಎಳೆದು ಚುಂಬಿಸುತ್ತಾರೆ.
ಸ್ಕ್ರಿಪ್ಟ್‌ನಲ್ಲಿ ಅಂತಹ ದೃಶ್ಯಗಳಿಗೆ ಬೇಡಿಕೆ ಇದ್ದರೂ ಸಹ, ಅವುಗಳನ್ನು ತಪ್ಪಿಸಬಹುದಿತ್ತು ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಅಂತೂ ಟ್ರೇಲರ್ ನೋಡಿದ ಅಭಿಮಾನಿಗಳಲ್ಲಿ ಪರ ಹಾಗು ವಿರೋಧ ಚರ್ಚೆಗಳು ನಡೆಯುತ್ತಿದೆ.