ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮೂಲದ ಯುವತಿ ಪಂಜಾಬ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವಂತಹ ಘಟನೆ ಮೇ. 17 ರಂದು ಸಂಜೆ ನಡೆದಿದೆ.
ಏರೋಸ್ಪೇಸ್ನ ಉದ್ಯೋಗಿ ಆಕಾಂಕ್ಷಾ ಎಸ್. ನಾಯರ್ ಮೃತ ಯುವತಿ. 3ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಗಳ ಸಾವಿನ ವಿಷಯ ತಿಳಿಯುತ್ತಿದ್ದಂತೆ ಮೃತ ಆಕಾಂಕ್ಷಾ ಪೋಷಕರಾದ ಸುರೇಂದ್ರ ಮತ್ತು ಸಿಂಧೂದೇವಿ ನಿನ್ನೆಯೇ ಪಂಜಾಬ್ಗೆ ತೆರಳಿದ್ದಾರೆ. ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಂಜಾಬ್ನ ಎಲ್.ಸಿ.ಯು ಪಗ್ವಾಡ ಕಾಲೇಜಿನಲ್ಲಿ ಓದಿದ್ದ ಆಕಾಂಕ್ಷಾ, 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಉದ್ಯೋಗಕ್ಕೆ ಜಪಾನ್ಗೆ ಹೋಗಲು ಪ್ಲ್ಯಾನ್ ಕೂಡ ನಡೆಸಿದ್ದರು. ಇದಕ್ಕಾಗಿ ನಿನ್ನೆ ಕಾಲೇಜಿಗೆ ತೆರಳಿ ಸರ್ಟಿಫಿಕೇಟ್ ಪಡೆದುಕೊಂಡು ಬಂದಿದ್ದರು. ಈ ವಿಚಾರವನ್ನು ಫೋನ್ ಮಾಡಿ ಆಕಾಂಕ್ಷಾ ತನ್ನ ಪೋಷಕರಿಗೂ ತಿಳಿಸಿದ್ದಾಳೆ. ಆದರೆ ಆಕಾಂಕ್ಷ ಮಹಡಿಯಿಂದ ಬಿದ್ದು ಮೃತಪಟ್ಟಿದ್ದು ಯಾಕೆ ಎನ್ನುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಖಂಡಿತ ಸಹಜ ಸಾವಲ್ಲ.ಆತ್ಮಹತ್ಯೆ ಕೂಡಾ ಅಲ್ಲ.ಅನಿವಾರ್ಯ ಸಾವು.ಯಾರಿಂದಲೋ ಸಾಯಲೇಬೇಕಾದ ಪರಿಸ್ಥಿತಿ ಇದಿರಾಗಿತ್ತು.
ಅಂದರೆ ಸಾವಿಗೆ ಪ್ರೇರಣೆ ಅಥವಾ ಪ್ರಚೋದನೆ.