ಪನೀರ್ ಪ್ರೇಮಿಗಳಿಗಾಗಿಯೇ ವಿಶೇಷವಾಗಿ ತಯಾರಾಗುವ ಡಿಶ್ಗಳಲ್ಲಿ ಕ್ಯಾಷ್ಯೂ ಪನೀರ್ ಮಸಾಲಾ ಒಂದಾಗಿದೆ. ಇದು ಹೊಟ್ಟೆಗಿಂತ ಕಣ್ಣಿಗೆ ತೃಪ್ತಿ ನೀಡುವಂತದ್ದು ಹಾಗಂತ ನಾಲಿಗೆಗೆ ಮೋಸ ಖಂಡಿತ ಇಲ್ಲ. ಇದನ್ನ ಬಟರ್ ನಾನ್, ಜೀರಾ ರೈಸ್ ಅಥವಾ ಚಪಾತಿ ಜೊತೆ ತಿನ್ನಬಹುದು.
ಬೇಕಾಗುವ ಸಾಮಗ್ರಿಗಳು
ಪನೀರ್ – 200 ಗ್ರಾಂ
ಕ್ಯಾಷ್ಯೂನಟ್ – 15-20
ಟೊಮೇಟೋ – 2
ಈರುಳ್ಳಿ – 1
ಬೆಳ್ಳುಳ್ಳಿ – 1 ಟೀಸ್ಪೂನ್
ಹಸಿಮೆಣಸು – 1
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಧನಿಯಾ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – ½ ಟೀಸ್ಪೂನ್
ಗರಂ ಮಸಾಲಾ – ½ ಟೀಸ್ಪೂನ್
ಹಾಲು ಅಥವಾ ಫ್ರೆಶ್ ಕ್ರೀಮ್ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ ಅಥವಾ ಬೆಣ್ಣೆ – 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲು ಕ್ಯಾಷ್ಯೂಗಳನ್ನು 15 ನಿಮಿಷ ತಣ್ಣನೆಯ ನೀರಿನಲ್ಲಿ ನೆನೆಸಿಡಿ. ನಂತರ ಪೇಸ್ಟ್ ಮಾಡಿ. ನಂತರ ಎಣ್ಣೆ ಅಥವಾ ಬೆಣ್ಣೆ ಬಾಣಲೆಯಲ್ಲಿ ಹಾಕಿ, ಅದರಲ್ಲಿ ಜೀರಿಗೆ, ತುರಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿಮೆಣಸು ಹಾಕಿ ಹುರಿಯಿರಿ. ಈಗ ಟೊಮೇಟೋ ಪ್ಯೂರಿ ಸೇರಿಸಿ, ಎಣ್ಣೆ ಬಿಡುವವರೆಗೆ ಚೆನ್ನಾಗಿ ಕುದಿಸಿ. ಈಗ ಕ್ಯಾಷ್ಯೂ ಪೇಸ್ಟ್ ಸೇರಿಸಿ, 5 ನಿಮಿಷ ಹುರಿಯಿರಿ. ಇದಕ್ಕೆ ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ.
ಈಗ ಪನೀರ್ ತುಂಡುಗಳು ಹಾಕಿ, 5-7 ನಿಮಿಷ ಕುದಿಸಿ. ಕೊನೆಯಲ್ಲಿ ಹಾಲು ಅಥವಾ ಫ್ರೆಶ್ ಕ್ರೀಮ್ ಹಾಕಿ ಮಿಶ್ರಣ ಮಾಡಿ. ಗರಂ ಮಸಾಲಾ ಸೇರಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಕ್ಯಾಷ್ಯೂ ಪನೀರ್ ಮಸಾಲಾ ರೆಡಿ.