ಬೆಳಗ್ಗೆ ದೋಸೆ ಇಡ್ಲಿ ಮಾಡಿ ಆಗಿದೆ ಚಟ್ನಿ ಏನ್ ಮಾಡೋದು ಅಂತ ಯೋಚ್ನೆ ಮಾಡ್ತಿದ್ರೆ ಈ ಸಿಂಪಲ್ ಎಳ್ಳು ಚಟ್ನಿ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಎಳ್ಳು 2 ಚಮಚ
ತೆಂಗಿನಕಾಯಿ 4 ಚಮಚ
ಕೆಂಪು ಮೆಣಸಿನಕಾಯಿ 4-5
ಎಳ್ಳೆಣ್ಣೆ 2 ಚಮಚ
ಬೆಳ್ಳುಳ್ಳಿ 1 ಎಸಳು
ಸಾಸಿವೆ 1/4 ಚಮಚ
ಹುಣಸೆಹಣ್ಣು ಸಣ್ಣ ತುಂಡು
ಉಪ್ಪು ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ತೆಂಗಿನಕಾಯಿ,ಕೆಂಪು ಮೆಣಸಿನಕಾಯಿ, ಉಪ್ಪು, ಎಳ್ಳು ಸೇರಿಸಿ ಹುರಿಯಿರಿ, ನಂತರ ಇದನ್ನುಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
ಮಿಕ್ಸಿ ಗೆ ಬೆಳ್ಳುಳ್ಳಿ ಮತ್ತು ಹುಣಸೆಹಣ್ಣಿನ ರಸ ಹಾಗೂ ಹುರಿದಿಟ್ಟ ತೆಂಗಿನಕಾಯಿ ಎಳ್ಳಿನ ಮಿಶ್ರಣವನ್ನು ಹಾಕಿ ನಯವಾದ ಪೇಸ್ಟ್ ರೀತಿ ರುಬ್ಬಿಕೊಂಡು ಕೊನೆಗೆ ಸಾಸಿವೆಯಿಂದ ಒಗ್ಗರಣೆ ಕೊಟ್ಟರೆ ಎಳ್ಳು ಚಟ್ನಿ ರೆಡಿ.