ದಿನಭವಿಷ್ಯ: ಬೇರೆಯವರ ಸ್ವಾರ್ಥಕ್ಕೆ ನೀವು ಬಲಿಯಾಗಬೇಡಿ, ಅರ್ಥ ಮಾಡಿಕೊಳ್ಳಿ!

ಮೇಷ
ಸಮಸ್ಯೆಯೊಂದು ಪರಿಹಾರ ಕಾಣದೆ  ಮನಸ್ಸಿಗೆ ಚಿಂತೆ. ಕೆಲವರ ವರ್ತನೆ ಅಸಹನೀಯ ಎನಿಸೀತು. ಹೊಂದಾಣಿಕೆ ಮುಖ್ಯ. ಧನವ್ಯಯ.

ವೃಷಭ
ಆರೋಗ್ಯದ ಬಗ್ಗೆ  ಹೆಚ್ಚು ಗಮನ ಕೊಡಿ. ತಿನಿಸು ಹಿತಮಿತವಾಗಿರಲಿ. ಸಾಂಸಾರಿಕ ವಿಷಯದಲ್ಲಿ  ಗೊಂದಲದ ಮನಸ್ಥಿತಿ.  ನಿಚ್ಚಳ ಮನ ಅಗತ್ಯ.

ಮಿಥುನ
ಖಾಸಗಿ ಬದುಕಲ್ಲಿ ನಿರಾಶೆ ತರುವ ಬೆಳವಣಿಗೆ. ಕೆಲಸದಲ್ಲಿ ಏಕಾಗ್ರತೆ ಕಷ್ಟ. ಪ್ರೀತಿಪಾತ್ರರ ಜತೆ ಜಗಳ ಉಂಟಾದೀತು. ಕೋಪತಾಪ ನಿಯಂತ್ರಿಸಿ.

ಕಟಕ
ನೆಮ್ಮದಿ, ಶಾಂತಿ ದೂರ. ಅದಕ್ಕೆ ಕಾರಣ ಕೆಲಸದ ಒತ್ತಡ ಮತ್ತು ಕೆಲವರ ವರ್ತನೆ. ವೃತ್ತಿಯಲ್ಲಿ ಕೆಲವರಿಂದ ಸಮಸ್ಯೆ. ಧ್ಯಾನ ಸಹಕಾರಿ.

ಸಿಂಹ
ಪ್ರೀತಿಪಾತ್ರರ ಜತೆ ಕಾಲಕ್ಷೇಪ. ಚಿಂತೆ ಪರಿಹಾರಕ್ಕೆ ಜೀವನಶೈಲಿ ಬದಲಿಸಿಕೊಳ್ಳಿ. ಮುಖ್ಯ ಸಂದರ್ಭದಲ್ಲಿ ಅವಸರದ ಪ್ರತಿಕ್ರಿಯೆ ತೋರಬೇಡಿ.

ಕನ್ಯಾ
ಕುಟುಂಬ ಸದಸ್ಯರ ಜತೆಗಿನ ಭಿನ್ನಮತ. ಅದಕ್ಕೆ ಆದ್ಯತೆ ಕೊಡಿ. ಎಲ್ಲವನ್ನು ಮರೆತು ಮುಂದೆ ಸಾಗುವುದು ಒಳ್ಳೆಯದು. ಆರ್ಥಿಕ ಒತ್ತಡ ಹೆಚ್ಚು.

ತುಲಾ
ನಿಮ್ಮನ್ನು ಯಾವುದೋ ಕೊರತೆ, ಸಮಸ್ಯೆ ಕಾಡುವುದು. ಕರ್ತವ್ಯದ ಮೇಲೆ ಗಮನ ಕೇಂದ್ರೀಕರಿಸಿ. ಇನ್ನುಳಿದ ಚಿಂತೆಗಳನ್ನು ಬದಿಗೆ ತಳ್ಳಿ.

ವೃಶ್ಚಿಕ
ವೃತ್ತಿಯಲ್ಲಿ ಅನ್ಯರಿಗೆ ಮಾರ್ಗದರ್ಶಿಯಾಗುವ ವರ್ತನೆ ತೋರುವಿರಿ. ಆತ್ಮೀಯರ ಬೆಂಬಲ. ಮನೆಯಲ್ಲಿ ನೆಮ್ಮದಿ ಕೆಡದಂತೆ ನೋಡಿಕೊಳ್ಳಿ.

ಧನು
ಹೆಚ್ಚು ವಿಶ್ವಾಸ, ಧೈರ್ಯ ಪ್ರದರ್ಶಿಸಿ. ಎಲ್ಲ ವಿಷಯಕ್ಕೂ ಹಿಂಜರಿಕೆ -ಲ ನೀಡದು. ಭವಿಷ್ಯದ ಯೋಜನೆ ಹಾಕಿಕೊಳ್ಳಲು ಸಕಾಲ. ಧನವ್ಯಯ.

ಮಕರ
ಮಾತಿಗೊಂದು, ಕೆಲಸಕೊಂದು ವರ್ತನೆ ತೋರದಿರಿ. ಕೊಟ್ಟ ಮಾತಿಗೆ ತಪ್ಪದಂತೆ ವರ್ತಿಸಿರಿ.  ವೈರಿಗಳು ಹೆಚ್ಚಬಹುದು, ಎಚ್ಚರದಿಂದಿರಿ.

ಕುಂಭ
ವ್ಯವಹಾರದಲ್ಲಿ ತೊಡಕು.  ನಿಮ್ಮ ಬಗ್ಗೆ  ಅಪಪ್ರಚಾರ ನಡೆಯಲು ಅವಕಾಶ ಕೊಡದಿರಿ. ಸೀದಾಸಾದಾ ವರ್ತನೆ ಒಳ್ಳೆಯದು.

ಮೀನ
ನಿಮ್ಮನ್ನು ತಮ್ಮ ಸ್ವಾರ್ಥಕ್ಕೆ ಕೆಲವರು ಬಳಸಿಕೊಳ್ಳುವರು. ಅದಕ್ಕೆ ಬಲಿಯಾಗದಿರಿ.  ಅವರ ಚರ್ಯೆಯ ಉದ್ದೇಶ ಅರಿತು ವ್ಯವಹರಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!