ಪ್ರೆಶರ್ ಕುಕ್ಕರ್ಅನ್ನು ಪ್ರತಿದಿನದ ಅಡುಗೆಗಾಗಿ ಬಳಸಿದರೆ, ಅದರಲ್ಲಿ ಎಣ್ಣೆ ಅಂಶ, ಆಹಾರದ ಸಣ್ಣ ಕಣಗಳು, ಮತ್ತು ಕಪ್ಪು ಕಲೆಗಳು ಉಂಟಾಗಬಹುದು. ಕುಕ್ಕರ್ನ ಸ್ವಚ್ಛವಾಗಿ ಇಟ್ಟುಕೊಂಡ್ರೆ
ಅದರ ಆಯಸ್ಸು ಜಾಸ್ತಿಯಾಗುತ್ತದೆ ಮತ್ತು ಆಹಾರವೂ ಸುರಕ್ಷಿತವಾಗಿರುತ್ತದೆ.
ಲಿಂಬೆಹಣ್ಣಿನ ರಸ ಮತ್ತು ಬೇಕಿಂಗ್ ಸೋಡಾ
ಒಂದು ಲಿಂಬಿನ ರಸ ಮತ್ತು ಒಂದು ಟೀಚಮಚ ಬೇಕಿಂಗ್ ಸೋಡಾವನ್ನು ಕುಕ್ಕರ್ಗೆ ಹಾಕಿ ಬೆರಸಿ ಅರ್ಧಗಂಟೆ ಬಿಡಿ. ನಂತರ ಸ್ಪಾಂಜ್ನಿಂದ ಉಜ್ಜಿ ತೊಳೆಯಿರಿ. ಇದರಿಂದ ಕಲೆಗಳು ಮತ್ತು ದುರ್ವಾಸನೆ ಹೋಗುತ್ತದೆ.
ಉಪ್ಪು ಬಳಸಿ
ಕುಕ್ಕರ್ನ ತಳದಲ್ಲಿ ಕಪ್ಪು ಬಣ್ಣದ ಕಲೆಗಳಿದ್ದರೆ, ಅಲ್ಲಿ ಉಪ್ಪು ಹಚ್ಚಿ ಸ್ಪಾಂಜ್ನಿಂದ ಉಜ್ಜಿ ಸುತ್ತಲೂ ಒತ್ತಿ ತೊಳೆಯಿರಿ. ಉಪ್ಪು ಕಲೆಗಳನ್ನು ತ್ವರಿತವಾಗಿ ಹೋಗುತ್ತದೆ.
ಗ್ಯಾಸ್ಕೆಟ್ ಅನ್ನು ತೆಗೆದು ಶುದ್ಧಗೊಳಿಸುವುದು
ಕುಕ್ಕರ್ನ ರಬ್ಬರ್ ಗ್ಯಾಸ್ಕೆಟ್ (ಸೀಲ್) ಅನ್ನು ಪ್ಲೇನ್ ವಾಟರ್ ಅಥವಾ ಸೋಪ್ ನಿಂದ ತೊಳೆದು, ಪೂರ್ಣವಾಗಿ ಒಣಗಿದ ಮೇಲೆ ಮಾತ್ರ ಮತ್ತೆ ಬಳಸುವುದು ಉತ್ತಮ. ಇಲ್ಲವಾದರೆ ದುರ್ವಾಸನೆ ಅಥವಾ ಬ್ಯಾಕ್ಟೀರಿಯಾ ಉತ್ಪತ್ತಿಯಾಗಬಹುದು.
ವಾರಕ್ಕೊಮ್ಮೆ ಸಂಪೂರ್ಣ ಶುದ್ಧೀಕರಣ
ವಾರದ ಯಾವುದೇ ದಿನ ನೀವು ಕುಕ್ಕರ್ ಅನ್ನು ಲಿಂಬೆಹಣ್ಣಿನ ರಸ, ಬೇಕಿಂಗ್ ಸೋಡಾ, ಉಪ್ಪು ಬೆರೆಸಿ ಕುಕ್ಕರ್ ಅನ್ನು ಸ್ವಲ್ಪ ಬಿಸಿ ಮಾಡಿ ನಂತರ ತಣ್ಣಗಾದ ನಂತರ ಚೆನ್ನಾಗಿ ತೊಳೆಯಿರಿ. ಇದು ಸಾಮಾನ್ಯ ಕಲೆಗಳನ್ನೂ ಕೂಡ ತೆಗೆದುಹಾಕುತ್ತದೆ.