ಇತ್ತೀಚಿನ ದಿನಗಳಲ್ಲಿ ಸಸ್ಯ ಆಧಾರಿತ ಹಾಲು (Plant-based milk) ಜನಪ್ರಿಯವಾಗುತ್ತಿದೆ. ಇದು ಪ್ರಾಣಿ ಮೂಲದ ಹಾಲಿಗೆ ಉತ್ತಮ ಪರ್ಯಾಯವಾಗಿದೆ. ಇದರಲ್ಲಿ ಹಲವು ಆರೋಗ್ಯ ಲಾಭಗಳನ್ನು ಒದಗಿಸುತ್ತದೆ. ಮುಖ್ಯವಾಗಿ, ಬಾದಾಮಿ, ಗೋಡಂಬಿ, ಸೊಯಾ, ತೆಂಗಿನಕಾಯಿ ಹಾಲು, ಓಟ್ಸ್ ಹೀಗೆ ಹಲವು ಮೂಲಗಳಿಂದ ಈ ಹಾಲುಗಳನ್ನು ತಯಾರಿಸಲಾಗುತ್ತದೆ.
ಕೊಬ್ಬಿನ ಪ್ರಮಾಣ ಕಡಿಮೆ:
ಸಸ್ಯ ಆಧಾರಿತ ಹಾಲಿನಲ್ಲಿ ಸ್ಯಾಚ್ಯುರೇಟೆಡ್ ಕೊಬ್ಬಿನ ಪ್ರಮಾಣ ಪ್ರಾಣಿ ಹಾಲಿಗಿಂತ ಕಡಿಮೆ ಇರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಸಹಾಯಕವಾಗುತ್ತದೆ.
ಲ್ಯಾಕ್ಟೋಸ್ ಮುಕ್ತ (Lactose-Free):
ಹಲವರು ಲ್ಯಾಕ್ಟೋಸ್ ಸಹಿಷ್ಣುತೆಯಿಲ್ಲದ ಕಾರಣದಿಂದ ಹಾಲು ಕುಡಿಯಲು ಕಷ್ಟ ಅನುಭವಿಸುತ್ತಾರೆ. ಸಸ್ಯ ಜನ್ಯ ಹಾಲುಗಳಲ್ಲಿ ಲ್ಯಾಕ್ಟೋಸ್ ಇಲ್ಲದೆ ಇರುವುದರಿಂದ ಎಲ್ಲರಿಗೂ ಸೂಕ್ತವಾಗಿದೆ.
ಹಾರ್ಮೋನ್ ಮತ್ತು ಆಂಟಿಬಯೋಟಿಕ್ ಮುಕ್ತ:
ಪ್ರಾಣಿ ಹಾಲುಗಳಲ್ಲಿ ಕೆಲವೊಮ್ಮೆ ಹಾರ್ಮೋನ್‌ಗಳು ಅಥವಾ ಔಷಧಿಗಳ ಅಂಶಗಳು ಇರಬಹುದು. ಆದರೆ ಸಸ್ಯ ಹಾಲುಗಳು ಸ್ವಚ್ಛವಾಗಿದ್ದು, ಈ ಸಂಶಯವಿಲ್ಲ.
ಫೈಬರ್ ಮತ್ತು ಪೋಷಕಾಂಶಗಳಲ್ಲಿ ಸಮೃದ್ಧ:
ಕೆಲವೊಂದು ಸಸ್ಯ ಹಾಲುಗಳು (ಓಟ್ಸ್, ಸೊಯಾ) ಫೈಬರ್, ವಿಟಮಿನ್‌ಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ. ಇದು ದೇಹದ ಇಮ್ಯೂನ್ ವ್ಯವಸ್ಥೆ ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಪರಿಸರ ಸ್ನೇಹಿ ಆಯ್ಕೆ
ಸಸ್ಯ ಹಾಲಿನ ಉತ್ಪಾದನೆಗೆ ಕಡಿಮೆ ನೀರು ಮತ್ತು ಇತರ ಅಂಶಗಳು ಬೇಕಾಗುತ್ತದೆ. ಇದು ಪರಿಸರದ ರಕ್ಷಣೆಗೆ ಸಹಕಾರಿ.