ಪಾಕ್ ಆಯಿತು ಈಗ ಬಾಂಗ್ಲಾ ಪರ ನಿಂತ ಟರ್ಕಿ: ಈಶಾನ್ಯ ರಾಜ್ಯಗಳನ್ನೊಳಗೊಂಡ ಗ್ರೇಟರ್ ಬಾಂಗ್ಲಾದೇಶ ನಕ್ಷೆ ಬಿಡುಗಡೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಬಾಂಗ್ಲಾದಲ್ಲೂ ಭಾರತ ವಿರೋಧಿ ಚಟುವಟಿಕೆಗಳಿಗೆ ಟರ್ಕಿ ಕುಮ್ಮಕ್ಕು ನೀಡುತ್ತಿದ್ದು, ಢಾಕಾದಲ್ಲಿರುವ ಟರ್ಕಿಶ್ ಬೆಂಬಲಿತ ಎನ್‌ಜಿಒ, ಭಾರತದ 7 ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ ನೇಪಾಳ, ಭೂತಾನ್ ಒಳಗೊಂಡ ‘ಗ್ರೇಟರ್ ಬಾಂಗ್ಲಾದೇಶ’ದ ನಕ್ಷೆಗಳನ್ನು ಪ್ರದರ್ಶಿಸಿದೆ.

ಗ್ರೇಟರ್ ಬಾಂಗ್ಲಾದೇಶ ಎಂದು ಕರೆಯಲ್ಪಡುವ ಪ್ರದೇಶವು ಮ್ಯಾನ್ಮಾರ್‌ನ ಅರಾಕನ್ ರಾಜ್ಯ, ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಭಾರತದ ಸಂಪೂರ್ಣ ಈಶಾನ್ಯ ಪ್ರದೇಶವನ್ನು ಒಳಗೊಂಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.

ಏಪ್ರಿಲ್‌ನಲ್ಲಿ, ಟಿಎಸ್‌ಸಿ, ಢಾಕಾ ವಿಶ್ವವಿದ್ಯಾಲಯದಿಂದ ಒಂದು ಚಿತ್ರ ಬಿಡುಗಡೆಯಾಗಿತ್ತು, ಅದರಲ್ಲಿ ಪೊಹೆಲಾ ಬೋಯಿಶಾಖ್ (ಬಾಂಗ್ಲಾ ಹೊಸ ವರ್ಷ) ಸಂದರ್ಭದಲ್ಲಿ “ಭಾರತದ ವಿವಿಧ ಭಾಗಗಳನ್ನು ಒಳಗೊಂಡಿರುವ ಸಲ್ತಾನತ್-ಇ-ಬಾಂಗ್ಲಾ ಎಂಬ ಗ್ರೇಟರ್ ಬಾಂಗ್ಲಾದೇಶದ ನಕ್ಷೆ”ಯೊಂದಿಗೆ ಒಬ್ಬ ವ್ಯಕ್ತಿ ಚಿತ್ರ ತೆಗೆದುಕೊಳ್ಳುತ್ತಿರುವುದನ್ನು ತೋರಿಸಲಾಗಿತ್ತು.

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಟರ್ಕಿ ಬಾಂಗ್ಲಾದೇಶದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿದೆ. ಇದು ಪಾಕಿಸ್ತಾನ-ಟರ್ಕಿ- ಬಾಂಗ್ಲಾಗಳ ಕೂಟದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಬಾಂಗ್ಲಾದೇಶದ ಸಶಸ್ತ್ರ ಪಡೆಗಳಿಗೆ ಪ್ರಸ್ತಾವಿತ ಮಿಲಿಟರಿ ಸರಬರಾಜುಗಳ ಮೂಲಕ ಟರ್ಕಿ ತನ್ನ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!