ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರಿನ ಲಿಂಗಸುಗೂರಿನ ಕಸಬಾದಲ್ಲಿ ಸಿಆರ್‌ಪಿಎಫ್ ಯೋಧನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾಗ ಯೋಧನನ್ನು ಸಿಆರ್‌ಪಿಎಫ್ ಎಎಸ್‌ಐ ಚನ್ನಬಸಪ್ಪ ಎಂದು ಗುರುತಿಸಲಾಗಿದೆ. ಅಕ್ಕನ ಜಮೀನಿನ ವಿಚಾರದಲ್ಲಿ ಜಗಳವಾಗಿದ್ದು, ಪಕ್ಕದ ಜಮೀನಿನ ಅಮರೇಶ್, ಮಂಜುನಾಥ ಎಂಬುವವರು ಹಲ್ಲೆ ನಡೆಸಿದ್ದಾರೆ.
ವಾಕಿಂಗ್ ಮಾಡುತ್ತಿದ್ದಾಗ ಏಕಾಏಕಿ ಬಂದ ಅಮರೇಶ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಚನ್ನಬಸಪ್ಪ ತಪ್ಪಿಸಿಕೊಂಡು ಓಡಿದ್ದು, ಬಿಡದೇ ಬೆನ್ನಟ್ಟಿ ಹಲ್ಲೆಗೆ ಮುಂದಾಗಿದ್ದಾರೆ. ಸದ್ಯ ಗಾಯಾಳು ಯೋಧನನ್ನ ಲಿಂಗಸುಗೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಈ ಘಟನೆ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.