ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ಆಕಾಂಕ್ಷ ಸಾವು ಪ್ರಕರಣದಲ್ಲಿ ಪ್ರೊಫೆಸರ್ ಒಬ್ಬನನ್ನು ಜಲಂಧರ್ ಪೊಲೀಸರು ಬಂಧಿಸಿದ್ದಾರೆ.
ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಪ್ರೊಫೆಸರ್ ಬಿಜಿಲ್ ಮ್ಯಾಥ್ಯೂ(45) ಬಂಧಿತ ಆರೋಪಿ.
ಆಕಾಂಕ್ಷ ಮೊಬೈಲ್ ಪಡೆದು ತನಿಖೆ ನಡೆಸಿರುವ ಪೊಲೀಸರಿಗೆ ಸಾವಿಗೂ ಮುನ್ನ ಆಕಾಂಕ್ಷ, ಬಿಜಿಲ್ ಮಾಥ್ಯೂಗೆ ತಾನು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಮೆಸೇಜ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಜಲಂಧರ್ ಪೊಲೀಸ್ ಠಾಣೆಗೆ ಆಕಾಂಕ್ಷ ಹೆತ್ತವರು ದೂರು ನೀಡಿದ್ದರು.
ಅಲ್ಲದೇ ಆಕಾಂಕ್ಷ ಆತ್ಮಹತ್ಯೆಯ ಬಳಿಕ ಬಿಜಿಲ್ ಮಾಥ್ಯೂ ತಲೆಮರಿಸಿಕೊಂಡಿದ್ದ. ಇದೀಗ ಜಲಂಧರ್ ಪೊಲೀಸರು ಬಿಜಲ್ ಮ್ಯಾಥ್ಯೂನನ್ನು ಬಂಧಿಸಿದ್ದಾರೆ. ಕಾಲೇಜಿನಿಂದ ಕೂಡ ಮ್ಯಾಥ್ಯೂನನ್ನು ಅಮಾನತು ಮಾಡಲಾಗಿದೆ.