September 30, 2026
Wednesday, September 30, 2026
spot_img

ರಂಜಾನ್‌ ವೇಳೆ ಸರ್ಕಾರಿ ಉರ್ದು ಶಾಲೆಗಳ ಅವಧಿ ಬದಲಾವಣೆಗೆ ಬಿಜೆಪಿ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಂಜಾನ್‌ ವೇಳೆ ಸರ್ಕಾರಿ ಉರ್ದು ಶಾಲೆಗಳ ಅವಧಿ ಬದಲಾವಣೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 12.45 ರವರೆಗೆ ಮಾತ್ರ ತರಗತಿ ನಡೆಸಲು ಆದೇಶಿಸಲಾಗಿದೆ. ಈ ಬಗ್ಗೆ ಬಿಜೆಪಿ ಕಿಡಿಕಾರಿದೆ.

ಕಾಂಗ್ರೆಸ್‌ ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿದೆ. ಯಾವುದೇ ಹಿಂದು ಹಬ್ಬಕ್ಕೆ ಶಾಲೆಯ ಸಮಯ ಬದಲಾಗೋದಿಲ್ಲ. ಆದರೆ ರಂಜಾನ್‌ ಆಚರಣೆಗಾಗಿ ಬದಲಾಯಿಸೋದು ಹೇಗೆ ಸರಿ? ಕಾಂಗ್ರೆಸ್‌ ಸದಾ ಹಿಂದುಗಳ ವಿರೋಧವಾಗಿಯೇ ನಡೆದುಕೊಂಡಿದೆ. ಮುಸ್ಲಿಮರಿಗೆ ಕೊಡುವಷ್ಟು ಗಮನ ಹಿಂದುಗಳಿಗೂ ಕೊಡಬೇಕು. ಮತಕ್ಕಾಗಿ ಹೀಗೆಲ್ಲಾ ಮಾಡಬಾರದು ಎಂದಿದೆ.

ರಂಜಾನ್ ಸಮಯದಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಬೇಗನೆ ಹೊರಡಬಹುದು ಎಂದು ನೀವು ಹೇಳುತ್ತಿದ್ದೀರಿ, ಆದರೆ ನವರಾತ್ರಿಯ ಸಮಯದಲ್ಲಿ ನೀವು ಅದಕ್ಕೆ ಅವಕಾಶ ನೀಡುತ್ತೀರಾ? ಕಾಂಗ್ರೆಸ್ ಯಾವಾಗಲೂ ತನ್ನ ಮತಬ್ಯಾಂಕ್ ಅನ್ನು ಮೊದಲು ಇಡುತ್ತದೆ. ಸಂವಿಧಾನದ ಪ್ರಕಾರ ನ್ಯಾಯಯುತವಾಗಿ ಮತ್ತು ಸಮಾನವಾಗಿ ಕೆಲಸಗಳನ್ನು ಮಾಡುವ ದೃಷ್ಟಿಕೋನ ಅವರಿಗೆ ಇಲ್ಲ ಎಂದಿದೆ.

Must Read