ಮೇಷ
ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ಕೆಣಕು ಮಾತು ಜಗಳಕ್ಕೆ ಕಾರಣವಾದೀತು. ಎಚ್ಚರವಿರಲಿ. ಮೈಕೈ ನೋವಿನಿಂದ ಶಮನ.
ವೃಷಭ
ಕೆಲಸದಲ್ಲಿ ತಪ್ಪಾಗದಂತೆ ನೋಡಿಕೊಳ್ಳಿ. ಜಾಗ್ರತೆ ವಹಿಸಿ. ತಾಳ್ಮೆಯುತ ವರ್ತನೆಯಿಂದ ಬಿಕ್ಕಟ್ಟು ಪರಿಹಾರ. ಆರೋಗ್ಯಕರ ಆಹಾರವಷ್ಟೆ ಸ್ವೀಕರಿಸಿ.
ಮಿಥುನ
ನಿಮ್ಮ ಪರಿಸರದಲ್ಲಿ ಮಹತ್ವದ ಬೆಳವಣಿಗೆ ಉಂಟಾದೀತು. ನಿಮ್ಮ ಮೇಲೂ ಅದರ ಪರಿಣಾಮವಾಗಲಿದೆ. ಕೋಪ ನಿಯಂತ್ರಿಸಿ.
ಕಟಕ
ವಿಶ್ವಾಸದಿಂದ ಕಾರ್ಯ ಎಸಗಿ. ಸಣ್ಣ ಹಿನ್ನಡೆಗೆ ಅಂಜದಿರಿ. ನಿಮ್ಮ ಮೆಚ್ಚಿನ ವ್ಯಕ್ತಿಯನ್ನು ಭೇಟಿ ಆಗುವಿರಿ. ಖರೀದಿ ಉತ್ಸಾಹ, ಖರ್ಚು ಅಽಕ.
ಸಿಂಹ
ಖಾಸಗಿ ಸಮಸ್ಯೆ ಕಿರಿಕಿರಿ ಸೃಷ್ಟಿಸೀತು. ಸಣ್ಣ ವಿಷಯದಲ್ಲೂ ತಪ್ಪು ಹುಡುಕುವ ಅಭ್ಯಾಸ ಬಿಡಿ. ಅದರಿಂದ ಮನೆಯ ಶಾಂತಿ ಕಲಕಬಹುದು
ಕನ್ಯಾ
ಆಶಾವಾದದಿಂದ ದಿನ ಆರಂಭಿಸಿ. ಇಷ್ಟ ಇಲ್ಲದಿದ್ದರೂ ಕೆಲವರ ಜತೆ ಹೊಂದಾಣಿಕೆ. ಲಘುವಾದ ಮಾತು ಸಂಬಂಧ ಕೆಡಿಸಬಹುದು.
ತುಲಾ
ಸಂಘಟಿತ ಕಾರ್ಯದಿಂದ ಯಶಸ್ಸು. ಎಲ್ಲರ ಸಹಕಾರ ಪಡೆದು ಮುನ್ನಡೆಯಿರಿ. ಆದರೂ ಕೆಲವರ ಅಸಮಾಧಾನ ಎದುರಿಸುವಿರಿ.
ವೃಶ್ಚಿಕ
ಸಹೋದ್ಯೋಗಿಗಳ ಜತೆ ಸಹಕಾರ ಇರಲಿ. ಖರ್ಚು ಅಽಕ. ಇಷ್ಟದ ವ್ಯಕ್ತಿಯ ಜತೆ ಸಂವಾದ. ಸಣ್ಣ ವಿಷಯಕ್ಕೆ ಬೇಸರ ಪಡುವಿರಿ.
ಧನು
ಸಾಮಾಜಿಕ ಚಟುವಟಿಕೆ ಹೆಚ್ಚು. ಇದರಿಂದ ನಿಮ್ಮ ಮನಸ್ಸು ನಿರಾಳವಾಗಲಿದೆ. ವೃತ್ತಿಯ ಸಮಸ್ಯೆಯೊಂದು ಪರಿಹಾರ ಕಾಣಲಿದೆ.
ಮಕರ
ವ್ಯವಹಾರ ಬೇಗ ಮುಗಿಸಲು ಬಯಸಿದರೂ ಅದು ಸಾಧ್ಯವಾಗದು. ಎಲ್ಲವೂ ವಿಳಂಬವಾಗಲಿದೆ. ಕೆಲವರ ಕಿರಿಕಿರಿ ಎದುರಿಸುವಿರಿ.
ಕುಂಭ
ಪ್ರೀತಿಪಾತ್ರರು ನಿಮ್ಮ ನಿರೀಕ್ಷೆಗೆ ವಿರುದ್ಧವಾಗಿ ವರ್ತಿಸಿಯಾರು. ಅವರನ್ನು ದೂರಬೇಡಿ. ಕಾರಣ ತಿಳಿದು ಪರಿಹಾರ ಕಂಡುಕೊಳ್ಳಿ.
ಮೀನ
ಹರ್ಷ ತರುವ ವಿಷಯದತ್ತ ಗಮನ ಹರಿಸಿ. ಆರೋಗ್ಯ ಸಮಸ್ಯೆ ಪರಿಹಾರ, ನಿರಾಳತೆ. ಕೌಟುಂಬಿಕ ಬೇಡಿಕೆ ಈಡೇರಿಸಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ