ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಲ್ಲಿ ಭಾರೀ ಮಳೆಗೆ ಸಾಯಿ ಲೇಔಟ್ ಸೇರಿದಂತೆ ಕೆಲವು ಪ್ರದೇಶಗಳು ಮುಳುಗಡೆ ಆಗಿವೆ. ಈ ಹಿನ್ನೆಲೆ ಸಾಯಿ ಲೇಔಟ್ಗೆ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರು, ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಸಿಟಿ ರೌಂಡ್ಸ್ಗೆ ಬಂದ ಸಿಎಂ ಹಾಗೂ ಸಚಿವರ ಮೇಲೆ ಸಾಯಿ ಲೇಔಟ್ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬನ್ನಿ ಮಳೆಯಿಂದ ತೊಂದರೆಯಾದ ಮನೆಗಳಿಗೆ ಭೇಟಿ ನೀಡಿ. ದೂರದಿಂದ ನೋಡಿದ್ರೆ ನಿಮಗೆ ಏನು ಗೊತ್ತಾಗುತ್ತೆ? ಎಂದು ಸ್ಥಳೀಯ ಮಹಿಳೆಯರು ಸಿಎಂಗೆ ಆಗ್ರಹಿಸಿದರು.
ಸಾಯಿ ಲೇಔಟ್ನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸಾರ್ವಜನಿಕರ ಮನವಿ ಆಲಿಸಿದರು. ಪ
ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಕೆ.ಜೆ ಜಾರ್ಜ್ ಕೂಡ ಸ್ಥಳೀಯರ ಮನವಿ ಆಲಿಸಿದರು. ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕರನ್ನ ಸಮಾಧಾನ ಪಡಿಸಲು ಪ್ರಯತ್ನಿಸಿದರು.