ಪೂಜಾ ಖೇಡ್ಕರ್​ಗೆ ಸುಪ್ರೀಂ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಮಜೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಕೇಡರ್​ನ ವಜಾಗೊಂಡ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್​​ಗೆ ಸುಪ್ರೀಂ ಕೋರ್ಟ್​ ನಿರೀಕ್ಷಣಾ ಜಾಮೀನು ನೀಡಿದೆ.

ಹುದ್ದೆ ಪಡೆಯಲು ಖೇಡ್ಕರ್​ ನಕಲಿ ಒಬಿಸಿ ಮತ್ತು ಪಿಡಬ್ಲ್ಯೂಬಿಡಿ (ವಿಕಲಚೇತನ ವ್ಯಕ್ತಿಗಳು) ಪ್ರಮಾಣಪತ್ರಗಳನ್ನು ಸಲ್ಲಿಸಿದ ಆರೋಪವನ್ನು ಎದುರಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಸತೀಶ್​ ಚಂದ್ರ ಶರ್ಮಾ ಅವರಿದ್ದ ಪೀಠ ಖೇಡ್ಕರ್​ಗೆ ಸಂಪೂರ್ಣ ತನಿಖೆಗೆ ಸಹಕಾರ ನೀಡುವಂತೆ ಸೂಚಿಸಿದ್ದು, 35 ಸಾವಿರ ರೂ. ಶೂರಿಟಿ ನೀಡುವಂತೆ ಸೂಚಿಸಿದೆ.

ಆಕೆ ಮಾಡಿರುವ ಘೋರ ತಪ್ಪು ಏನು. ಆಕೆ ಡ್ರಗ್ಗ್​ ಮಾರಾಟ ಮಾಡುತ್ತಿಲ್ಲ. ಅಥವಾ ಭಯೋತ್ಪಾದಕಿ ಅಲ್ಲ. ಆಕೆ ಕೊಲೆ ಮಾಡಿಲ್ಲ. ಎನ್​ಡಿಪಿಎಸ್​ ಆರೋಪಿಯಲ್ಲ ಎಂದು ತಿಳಿಸಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಕಲಿ ಪ್ರಮಾಣ ಪತ್ರ ನೀಡುವ ಮೂಲಕ ದೇಶದ ಅತ್ಯುನ್ನತ ನಾಗರಿಕ ಸೇವೆಯಲ್ಲಿ ಹುದ್ದೆ ಪಡೆದಿದ್ದ ಖೇಡ್ಕರ್​ಗೆ ಬಂಧನದಿಂದ ರಕ್ಷಣೆ ನೀಡಿ ಈ ಹಿಂದೆ ಸುಪ್ರೀಂ ಕೋರ್ಟ್ ಮಧ್ಯಂತರ​​ ಆದೇಶ ನೀಡಿತ್ತು.

ನಿರೀಕ್ಷಣಾ ಜಾಮೀನು ಮನವಿಯನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್​ ಆದೇಶದ ವಿರುದ್ಧ ಮಾಜಿ ಅಧಿಕಾರಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!