ಹೊಸದಿಗಂತ ಡಿಜಿಟಲ್ ಡೆಸ್ಕ್:
1998ರಲ್ಲಿ ನಡೆದ ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ದೋಷಮುಕ್ತವಾಗಿದ್ದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ತಬು ಮತ್ತು ನೀಲಂಗೆ ಮತ್ತೆ ಕಂಟಕ ಶುರುವಾಗಿದ್ದು, ಪ್ರಕರಣದಿಂದ ಇವರನ್ನು ಕೈ ಬಿಟ್ಟ ವಿಚಾರದಲ್ಲಿ ರಾಜಸ್ಥಾನ ಸರ್ಕಾರ ಹೈಕೋರ್ಟ್ ಮೊರೆ ಹೋಗಿದೆ.
ಈಗಾಗಲೇ ಸಲ್ಮಾನ್ ಖಾನ್ (ಅಪರಾಧಿ ಎಂದು ಸ್ಥಳೀಯ ಕೋರ್ಟ್ ತೀರ್ಪು ನೀಡಿದೆ. ಆ ಬಳಿಕ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಸಲ್ಮಾನ್ ಖಾನ್, ಸೈಫ್, ತಬು, ಸೋನಾಲಿ ಬೇಂದ್ರ ಮೊದಲಾದವರು ‘ಹಮ್ ಸಾತ್ ಸಾತ್ ಹೇ’ ಚಿತ್ರೀಕರಣದ ಶೂಟ್ಗೆ ಜೋಧ್ಪುರ್ ಸಮೀಪದ ಗ್ರಾಮ ಒಂದಕ್ಕೆ ತೆರಳಿದ್ದರು. ಶೂಟ್ ಪೂರ್ಣಗೊಂಡ ಬಳಿಕ ಸಲ್ಮಾನ್ ರಾತ್ರಿ ಬೇಟೆಗೆ ತೆರಳಿ ಕೃಷ್ಣಮೃಗ ಹತ್ಯೆ ಮಾಡಿದ್ದರು. ಈ ವೇಳೆ ಸಹಕಲಾವಿದರು ಜೊತೆಗಿದ್ದವರೂ ಸಾಥ್ ನೀಡಿದ ಆರೋಪ ಇದೆ. ಈ ಪ್ರಕರಣದ ವಿಚಾರಣೆ ಬರೋಬ್ಬರಿ 20 ವರ್ಷಗಳ ಕಾಲ ನಡೆಯಿತು ಮತ್ತು 2018ರಲ್ಲಿ ಸಲ್ಮಾನ್ ಖಾನ್ ಅವರನ್ನು ಅಪರಾಧಿ ಎಂದು ತೀರ್ಪು ನೀಡಿತು. ಈ ವೇಳೆ ಸೈಫ್ ಅಲಿ ಖಾನ್, ತಬು, ಸೋನಾಲಿ ಬೇಂದ್ರೆ ಹಾಗೂ ನಿಲಂನ ನಿರಪರಾಧಿ ಎಂದು ಘೋಷಿಸಲಾಯಿತು.
ಇದರ ನಡುವೆ ಇದೀಗ ರಾಜಸ್ಥಾನ ಸರ್ಕಾರವು ಈ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದೆ. ಈ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಮನೋಜ್ ಕುಮಾರ್ ಗಾರ್ಗ್ ಅವರು ಜುಲೈ 28ಕ್ಕೆ ಪ್ರಕರಣದ ವಿಚಾರಣೆಯನ್ನು ನಿಗದಿ ಮಾಡಿದ್ದಾರೆ.