ಅಮೃತಸರದ ಶಾಹಪುರ ಗಡಿ ಚೌಕಿಯಲ್ಲಿ ಪಾಕ್‌ ವ್ಯಕ್ತಿಯ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಪಾಕಿಸ್ತಾನ ಗಡಿಯ ಅಮೃತಸರದ ಶಾಹಪುರ ಗಡಿ ಚೌಕಿಯಲ್ಲಿ ಪಾಕಿಸ್ತಾನಿ ನಾಗರಿಕನನ್ನು ಗಡಿ ಭದ್ರತಾ ಪಡೆ (BSF) ಬಂಧಿಸಿದೆ.

ಪ್ರಾಥಮಿಕ ತಪಾಸಣೆಯಲ್ಲಿ ಆರೋಪಿಯ ಬಳಿ ಕೆಲವು ಹಣವನ್ನು ಹೊರತುಪಡಿಸಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಪ್ರಸ್ತುತ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ ಅಮೃತಸರ ಜಿಲ್ಲೆಯ ದರಿಯಾ ಮನ್ಸೂರ್ ಗಡಿ ಚೌಕಿಯಲ್ಲಿ ಬಿಎಸ್‌ಎಫ್‌ನ 117ನೇ ಬೆಟಾಲಿಯನ್‌ ಮತ್ತೊಬ್ಬ ಪಾಕಿಸ್ತಾನಿ ನಾಗರಿಕನನ್ನು ಬಂಧಿಸಿತ್ತು. ಈ ವ್ಯಕ್ತಿ ಅಕ್ರಮವಾಗಿ ಗಡಿ ದಾಟಿದ್ದು, ಪೊದೆಯೊಳಗೆ ಅಡಗಿಕೊಂಡಿದ್ದ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!