ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿನ ರಾಮ ಮಂದಿರದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಜೂನ್ 3ರಿಂದ ಪ್ರಾರಂಭವಾಗುವ ಸಮಾರಂಭದಲ್ಲಿ ‘ರಾಮ ದರ್ಬಾರ್’ನ ಪವಿತ್ರೀಕರಣ ನಡೆಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
2024ರ ಜನವರಿ 22ರಂದು ಆಯೋದ್ಯ ರಾಮ ಲಲ್ಲನ ಪ್ರಾಣಪ್ರತಿಷ್ಠೆ ನೆರವೇರಿಸಲಾಗಿತ್ತು. ಬಳಿಕ ಆಯೋಧ್ಯೆ ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆದರೆ ಮಹಡಿಗಳ ನಿರ್ಮಾಣ ಕಾರ್ಯ ಬರದಿಂದ ಸಾಗಿತ್ತು. ಇದೀಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಧ್ವಜಸ್ಥಂಬ ಸೇರಿದಂತೆ ಇತರ ಕಾಮಗಾರಿಗಳು ಪೂರ್ಣಗೊಂಡಿದೆ. ಮೇ ತಿಂಗಳ ಅಂತ್ಯಕ್ಕೆ ರಾಮ ಮಂದಿರದ ಕಾಮಗಾರಿ ಪೂರ್ಣಗೊಳ್ಳಲಿದೆ. ಜೂನ್ 5ಕ್ಕೆ ರಾಮ ದರ್ಬಾರ್ ಪ್ರಾಣಪ್ರತಿಷ್ಠೆ ನಡೆಯಲಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
ರಾಮ ದರ್ಬಾರ್ನ ‘ಪ್ರಾಣ ಪ್ರತಿಷ್ಠೆ’ ಜೂನ್ 3ರಿಂದ 5ರವರೆಗೆ ನಡೆಯಲಿದೆ. ಜೂನ್ 5ರಂದು ನಡೆಯಲಿರುವ ಪವಿತ್ರೀಕರಣ ಸಮಾರಂಭಕ್ಕೆ ವಿವಿಧ ಧರ್ಮಗಳ ಆಧ್ಯಾತ್ಮಿಕ ನಾಯಕರನ್ನು ಆಹ್ವಾನಿಸಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ. ಆದರೆ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಯಾವುದೇ ವಿಐಪಿಗಳು ಅಥವಾ ರಾಜಕೀಯ ನಾಯಕರು ಈ ಕಾರ್ಯಕ್ರಮದ ಭಾಗವಾಗಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪವಿತ್ರೀಕರಣದ ನಂತರ, ದೇವಾಲಯದ ಹೊಸದಾಗಿ ಪೂರ್ಣಗೊಂಡ ಭಾಗವನ್ನು ಸಮಾರಂಭದ ನಂತರ ಒಂದು ವಾರದೊಳಗೆ ಸಾರ್ವಜನಿಕರಿಗೆ ತೆರೆಯಲಾಗುವುದು. ‘ರಾಮ ಪಥ’, ‘ಭಕ್ತಿ ಪಥ’ ಮತ್ತು ‘ಜನ್ಮಭೂಮಿ ಪಥ’ ಅಭಿವೃದ್ಧಿಯ ನಂತರ, ಅಯೋಧ್ಯೆಯಲ್ಲಿ 20 ಕಿ.ಮೀ ಉದ್ದದ ಹೊಸ ‘ಭಾರತ್ ಪಥ’ವನ್ನು ಶೀಘ್ರದಲ್ಲೇ ನಿರ್ಮಿಸಲಾಗುವುದು. 900 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿ ಘೋಷಿಸಿದೆ.