ಹೊಸದಿಗಂತ ಮುಂಬೈ :
ಅಟೊಮೊಟಿವ್ ಘಟಕಗಳನ್ನು ತಯಾರಿಸುವ ಭಾರತ ಮೂಲದ ಬೆಲ್ರಿಸ್ ಇಂಡಸ್ಟ್ರೀಸ್ ಸಂಸ್ಥೆ ಐಪಿಒಗೆ ಲಗ್ಗೆ ಇಟ್ಟಿದ್ದು ಬುಧವಾರ (ಮೇ 21)ರಂದು ಆರಂಭಿಕ ಸಾರ್ವಜನಿಕ ಕೊಡುಗೆ ಆರಂಭವಾಗಿದೆ. ಮೇ 23ರವರೆಗೆ ಐಪಿಒ ಹೂಡಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸೇಪ್ಟಿ ಕ್ರಿಟಿಕಲ್ ವ್ಯವಸ್ಥೆ ಮತ್ತು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ವಾಹನ, ಕಮರ್ಷಿಯಲ್ ವಾಹನ , ಕೃಷಿ ವಾಹನಗಳಿಗೆ ಇಂಜಿನಿಯರಿಂಗ್ ಸೆಲ್ಯೂಶನ್‌ನ್ನು ನೀಡುವ ಬೆಲ್ರಿಸ್ ಸಂಸ್ಥೆ ಆಫರ್ ಫಾರ್ ಸೇಲ್ ಇಲ್ಲದೇ, 2150 ಕೋಟಿ ರೂ ಗಳ ಸಂಪೂರ್ಣ ಹೊಸ ಸಂಚಿಕೆಯನ್ನು ಐಪಿಒ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಐಪಿಒ ಷೇರು ಬೆಲೆ ಎಷ್ಟು ?
ಪ್ರತಿ ಷೇರಿಗೆ ಸಂಸ್ಥೆ 85-90 ರೂ ನಿಗದಿ ಮಾಡಿದ್ದು ಹೂಡಿಕೆದಾರರು ಕನಿಷ್ಟ 166 ಷೇರುಗಳಿಗೆ ಬಿಡ್ ಮಾಡಬಹುದಾಗಿದೆ. ಬಿಎಸ್‌ಇ ಹಾಗೂ ಎನ್‌ಎಸ್‌ಇ ಯಲ್ಲಿ ಸಂಸ್ಥೆಯ ಷೇರುಗಳು ಮೇ 28ರಂದು ಲಿಸ್ಟ್ ಆಗಲಿದೆ. ರಿಟೇಲ್ ಹೂಡಿಕೆದಾರರು 14,110 ರೂಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಮೇ 26ರಂದು ಐಪಿಒ ಹಂಚಿಕೆ ನಡೆಯಲಿದ್ದು 28ರಂದು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಲಿಸ್ಟ್ ಆಗಲಿದೆ.
ಯಾರಿಗೆ ಎಷ್ಟು ಮೀಸಲು ?
ಸಂಚಿಕೆಯ ಸುಮಾರು ಅರ್ಧದಷ್ಟು ಷೇರುಗಳನ್ನು ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಿಡಲಾಗಿದ್ದು ಶೇ 35 ರಷ್ಟು ರಿಟೇಲ್ ಹೂಡಿಕೆದಾರರಿಗೆ ಹಾಗೂ ಶೇ. 15 ರಷ್ಟು ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ ಮೀಸಲಿಡಲಾಗಿದೆ.
ಪ್ರಮುಖ ಬ್ರೊಕರೇಜ್ ಸಂಸ್ಥೆಗಳಾದ ಆನಂದ ರಾಠಿ, ಐ ಡೈರೆಕ್ಟ್, ವೆಂಚ್ಯೂರಾ ಸೆಕ್ಯೂರಿಟಿಸ್ , ಜಿಇಪಿಎಲ್ ಕ್ಯಾಪಿಟಲ್, ಎಸ್‌ಎಮ್‌ಐಎಫ್‌ಎಸ್, ಯುರೆಕಾ ಸೆಕ್ಯೂರಿಟಿಸ್, ಮಾರ್ವಾಡಿ ಫೈನಾನ್ಶಿಯಲ್ ಸರ್ವಿಸ್ , ಬಿಪಿ ವೆಲ್ತ್ ಆಂಡ್ ಚಾಯಿಸ್ ಬ್ರೊಕಿಂಗ್ ಸಂಸ್ಥೆಗಳು ಅಟೊಮೊಟಿವ್ ಕ್ಷೇತ್ರದಲ್ಲಿನ ಬೆಲ್ರಿಸ್ ಸಾಧನೆಯನ್ನು ಪರಿಗಣಿಸಿ ‘ಸಬ್‌ಸ್ಕ್ರೈಬ್’ ಟ್ಯಾಗ್ ನೀಡಿದೆ. ಎಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್ , ಹೆಚ್‌ಎಸ್‌ಬಿಸಿ ಸೆಕ್ಯೂರಿಟಿಸ್ ಮತ್ತು ಕ್ಯಾಪಿಟಲ್ ಮಾರ್ಕೆಟ್ (ಇಂಡಿಯ) ಪ್ರೈವೆಟ್ ಲಿಮಿಟೆಡ್ , ಜೆಫ್ರೀಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್‍ಗಳಾಗಿದ್ದಾರೆ.