ಹೊಸದಿಗಂತ ಡಿಜಿಟಲ್ ಡೆಸ್ಕ್:
ದೈವ ಶಕ್ತಿ ಹಾಗೂ ಜನಶಕ್ತಿ ಇರೋವರೆಗೆ ಯಾರು ನನ್ನನ್ನು ಕಾಡಲು ಆಗುವುದಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ಮಂತ್ರಾಲಯಕ್ಕೆಹೊರಟಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವೇಳೆ ಕೆಲ ಶಕ್ತಿಗಳನ್ನು ದಮನ ಮಾಡಬೇಕು ಎಂದರೆ ದೇವರ ಹತ್ರ ಹೋಗಬೇಕಲ್ವ, ಆ ಕೆಲಸ ಮಾಡ್ತಿದಿನಿ. ನಾನು ದೇವಸ್ಥಾನಕ್ಕೆ ಸಾಮಾನ್ಯವಾಗಿ ಹೋಗುತ್ತೇನೆ. ಹಾಗಾಗಿ ಮಂತ್ರಾಲಯಕ್ಕೆ ಹೋಗಲು ಬಂದಿದ್ದೇನೆ. ಮೊನ್ನೆ ತಿರುಪತಿಗೆ ಹೋಗಿದ್ದೆ ನಮ್ಮ ತಂದೆ ಜೊತೆ. ಶೃಂಗೇರಿಗೂ ಹೋಗಿದ್ದೆ ಎಂದಿದ್ದಾರೆ.
ಕಾಂಗ್ರೆಸ್ಗೆ ರಾಜ್ಯದ ಜನತೆ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ಏನು ಮಾಡ್ತಾರೆ ಅಂತ ನೋಡೋಣ, ಈಗಾಗ್ಲೆ ಐದನೇ ಗ್ಯಾರಂಟಿ, ಆರನೇ ಗ್ಯಾರಂಟಿ, ಏಳನೇ ಗ್ಯಾರಂಟಿ ಅಂತ ಹೇಳ್ತಿದ್ದಾರೆ. ಮಳೆಯಿಂದ ಬೆಳೆ ಹಲವೆಡೆ ನಾಶ ಆಗಿದೆ, ಸರ್ಕಾರ ಬೆಳೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.