ಹೊಸದಿಗಂತ ವರದಿ,ಬಾಗಲಕೋಟೆ :
ನಮ್ಮ ಪಾಕಿಸ್ಥಾನ ಎಂದ ಖರ್ಗೆಗೆ ನಾಚಿಕೆಯಾಗಬೇಕು. ಕಾಂಗ್ರೆಸ್ ನ ಎಲ್ಲಾ ನಾಯಕರು ನೆಂಟರು ಪಾಕಿಸ್ಥಾನದಲ್ಲಿ ಇದ್ದಂಗ ಕಾಣಿಸುತ್ತಾರೆ.ಅದಕ್ಕಾಗಿ ನಮ್ಮ ಪಾಕಿಸ್ತಾನ ಎಂದು ಸಂಶೋಧನೆ ಮಾಡುತ್ತಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
ನಗರದ ರೈಲ್ವೆ ನಿಲ್ಧಾಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ಸಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ಪಾಕಿಸ್ಥಾನ ಎಂದು ಹೇಳಿದ್ದನ್ನು ಖಂಡಿಸಿದರು.
ನಮ್ಮ ವೈರಿ ರಾಷ್ಟ್ರ ನಮ್ಮ ಶತ್ರುಗಳ ಬಗ್ಗೆ ಯಾವ ಭಾಷೆ ಬಳಸಬೇಕು,ಅದೇ ಶಬ್ದದಲ್ಲಿ ಮಾತಾಡಾಬೇಕು..ಅದನ್ನೇ ಹೇಳೋದಕ್ಕೆ ಅವರಿಗೆ ನಾಚಿಕೆ ಆಗಬೇಕು ಎಂದರು.
ನಮ್ಮ ಪಾಕಿಸ್ತಾನ ಅನ್ನೋದಕ್ಕೆ ಯಾರೂ ಕೂಡಾ ಹೇಳಬಾರದು..ಸ್ವಾತಂತ್ರ್ಯ ಬಂದು 47 ವರ್ಷದಿಂದಲೂ ಅವರ ಜೊತೆ ಯುದ್ಧ ಮಾಡುತ್ತಾ ಬಂದಿದ್ದೇವೆ.ನಮಗೆ ಪಾಕಿಸ್ತಾನದಿಂದ ಸಾಕಷ್ಟು ನಷ್ಟವಾಗಿದೆ.ಇವತ್ತಿಗೂ ಕೂಡ ಪಾಕಿಸ್ತಾನ ಉಗ್ರರನ್ನು ಪೋಷಿಸುವ ಕೆಲಸ ಮಾಡುತ್ತಿದ್ದಾರೆ.ಒಬ್ಬ ಹಿರಿಯ ನಾಯಕರಾಗಿ ನಮ್ಮ ಪಾಕಿಸ್ತಾನ ಅನ್ನೋದನ್ನ ಖಂಡಿಸುವೆ ಎಂದು ಕಾರಜೋಳ ಹೇಳಿದರು.