ಹೊಸದಿಗಂತ ಡಿಜಿಟಲ್ ಡೆಸ್ಕ್:
‘ನನ್ನ ಮೈಯಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಕುದಿಯುತ್ತಿರುವ ಸಿಂದೂರ” ಎಂದು ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ಟೀಕಾಪ್ರಹಾರ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಕುದಿಯುವುದೇಕೆ?’ ಎಂದು ಪ್ರಶ್ನಿಸಿದ್ದಾರೆ.
ಭಯೋತ್ಪಾದನೆ, ಪಾಕಿಸ್ತಾನದ ಹೇಳಿಕೆ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ-ಪಾಕಿಸ್ತಾನದ ನಡುವಿನ ಮಧ್ಯಸ್ಥಿಕೆ ಬಗ್ಗೆ ಪ್ರಶ್ನೆಗಳ ಸರಮಾಲೆಯನ್ನೇ ಹಾಕಿದ್ದಾರೆ.
ಪ್ರಧಾನಿಯನ್ನು ಗುರಿಯಾಗಿಸಿಕೊಂಡ ಪೋಸ್ಟ್‌ನಲ್ಲಿ, ರಾಹುಲ್ ಗಾಂಧಿ, ‘ಮೋದೀಜಿ, ಬರೀ ಭಾಷಣ ಬಿಟ್ಟು, ನೀವು ಯಾಕೆ ಪಾಕಿಸ್ತಾನದ ಭಯೋತ್ಪಾದನೆಯ ಹೇಳಿಕೆಯನ್ನು ನಂಬಿದ್ದೀರಿ? ಟ್ರಂಪ್‌ಗೆ ತಲೆಬಾಗಿ ಭಾರತದ ಹಿತಾಸಕ್ತಿಗಳನ್ನು ಯಾಕೆ ಬಲಿಕೊಟ್ಟಿದ್ದೀರಿ? ಕ್ಯಾಮೆರಾ ಮುಂದೆ ಮಾತ್ರ ನಿಮ್ಮ ರಕ್ತ ಯಾಕೆ ಕುದಿಯುತ್ತೆ? ನೀವು ಭಾರತದ ಗೌರವಕ್ಕೆ ಧಕ್ಕೆ ತಂದಿದ್ದೀರಿ!’ ಎಂದು ಬರೆದಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರು ಇಂದು ರಾಜಸ್ಥಾನದ ಬಿಕಾನೇರ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದಾಗ ಪ್ರಧಾನಿ ಮೋದಿಯವರು ಮಾಡಿದ ಭಾಷಣವನ್ನು ಉಲ್ಲೇಖಿಸುತ್ತಾ, “ಮೋದಿ ತಮ್ಮ ಭಾಷಣದಲ್ಲಿ ತಮ್ಮ ಮನಸ್ಸು ತಂಪಾಗಿರುತ್ತದೆ, ಆದರೆ ರಕ್ತ ಮಾತ್ರ ಬಿಸಿಯಾಗಿರುತ್ತದೆ. ಈಗ, ಅದು ರಕ್ತವಲ್ಲ, ಕುದಿಯುತ್ತಿರುವ ಸಿಂದೂರ” ಎಂದು ಹೇಳಿದ್ದರು
ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆಗಳಲ್ಲಿ ವ್ಯಾಪಾರವನ್ನು ಬಳಸಿಕೊಂಡು ಮಧ್ಯಸ್ಥಿಕೆ ವಹಿಸಿ, ಕದನ ವಿರಾಮಕ್ಕೆ ಕಾರಣರಾದರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿಕೊಂಡ ನಂತರ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ವಿಷಯದ ಬಗ್ಗೆಯೂ ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ..