ದ್ವಿಪಕ್ಷೀಯ ಸಂಬಂಧ ಪರಸ್ಪರ ಕಾಳಜಿಗಳ ಆಧಾರ: ಟರ್ಕಿಗೆ ಸಂದೇಶ ನೀಡಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಟರ್ಕಿಯ ವಿರುದ್ಧದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಆಕ್ರೋಶ ಹೊರಹಾಕಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ನಿಲ್ಲಿಸಲು ಮತ್ತು ಇಸ್ಲಾಮಾಬಾದ್ ವರ್ಷಗಳಿಂದ ಆಶ್ರಯಿಸಿರುವ ಭಯೋತ್ಪಾದಕ ಪರಿಸರ ವ್ಯವಸ್ಥೆಯ ವಿರುದ್ಧ ಸ್ಪಷ್ಟ ಕ್ರಮಗಳನ್ನು ತೆಗೆದುಕೊಳ್ಳುವಂತೆ ಟರ್ಕಿ ಪಾಕಿಸ್ತಾನವನ್ನು ಬಲವಾಗಿ ಒತ್ತಾಯಿಸುತ್ತದೆ ಎಂದು ಭಾರತ ನಿರೀಕ್ಷಿಸುತ್ತದೆ ಎಂದು ಸಂದೇಶ ರವಾನಿಸಿದೆ.

ಪಹಲ್ಗಾಮ್ ದಾಳಿ ನಂತರ ಪಾಕಿಸ್ತಾನಕ್ಕೆ ಬೆಂಬಲಿಸಿದ ಟರ್ಕಿಯ ಕ್ರಮವನ್ನು ಟೀಕಿಸಿದ ರಣಧೀರ್ ಜೈಸ್ವಾಲ್, ದ್ವಿಪಕ್ಷೀಯ ಸಂಬಂಧಗಳು ಪರಸ್ಪರರ ಪ್ರಮುಖ ಕಾಳಜಿಗಳ ಸೂಕ್ಷ್ಮತೆಯನ್ನು ಆಧರಿಸಿರಬೇಕು. ಈ ವಿಚಾರದಲ್ಲಿ ಭಾರತದ ನಿಲುವು ಸ್ಥಿರ ಮತ್ತು ಬದ್ಧತೆಯಿಂದ ಕೂಡಿದೆ. ಸಂಬಂಧಗಳು ಪರಸ್ಪರರ ಪ್ರಮುಖ ಕಾಳಜಿಗಳ ಸೂಕ್ಷ್ಮತೆ ಮೇಲೆ ಬೆಳೆಯುತ್ತವೆ ಎಂದು ಹೇಳಿದರು.

ಸೆಲೆಬಿ ವಾಯುಯಾನ ವಿಷಯದ ಕುರಿತು ಮಾತನಾಡಿದ ಜೈಸ್ವಾಲ್, ದೆಹಲಿಯಲ್ಲಿರುವ ಟರ್ಕಿಶ್ ರಾಯಭಾರ ಕಚೇರಿಯೊಂದಿಗೆ ಸೆಲೆಬಿ ವಿಷಯದ ಬಗ್ಗೆ ಚರ್ಚಿಸಲಾಗಿದೆ. ಆದರೆ ಈ ನಿರ್ದಿಷ್ಟ ನಿರ್ಧಾರವನ್ನು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ತೆಗೆದುಕೊಂಡಿದೆ ಎಂದು ಅವರು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!