ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಇತ್ತೀಚೆಗಷ್ಟೇ ಪವಿತ್ರಾ ಗೌಡ, ದರ್ಶನ್ ಸೇರಿ 16 ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಮುಖಾಮುಖಿಯಾಗಿದ್ದರು.
ಈ ಭೇಟಿಯ ಬಳಿಕ ನಟಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಸಮಯ, ತಾಳ್ಮೆ, ಮೌನದ ಮಹತ್ವ ತಿಳಿಸುವ ಬಗ್ಗೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಒಂದು ಸ್ಟೋರಿಯಲ್ಲಿ ಸಮಯ ಮತ್ತು ತಾಳ್ಮೆ ತುಂಬಾ ಮುಖ್ಯ.. ಎಲ್ಲಾ ಪ್ರಶ್ನೆಗಳಿಗೂ ಮೌನವೇ ಅತ್ಯುತ್ತಮ ಉತ್ತರ.. ಪ್ರತಿಯೊಂದು ಸನ್ನಿವೇಶದಲ್ಲೂ ನಗುವುದು ಅತ್ಯುತ್ತಮ ಪ್ರತಿಕ್ರಿಯೆ ಅಂತ ಹಾಕಿಕೊಂಡಿದ್ದಾರೆ. ಮತ್ತೊಂದು ಸ್ಟೋರಿಯಲ್ಲಿ ಎಲ್ಲವನ್ನು ಕಳೆದುಕೊಂಡ ಹಾಗೆ ಸ್ವಲ್ಪದಿನ ನಟಿಸಿ ನೋಡು, ನಿನ್ನವರು ಯಾರು ಎಂದು ತಿಳಿಯುತ್ತದೆ. ತಾಳ್ಮೆ ತುಂಬಾ ಮುಖ್ಯ ಎಂದು ಪವಿತ್ರಾ ಗೌಡ ಬರೆದುಕೊಂಡಿದ್ದಾರೆ. ಆದ್ರೆ ಇದೀಗ ಈ ಪೋಸ್ಟ್ ಹಾಕಿರುವುದು ಸಾಕಷ್ಟು ಕುತೂಹಲವನ್ನು ಉಂಟು ಮಾಡಿದೆ.