ನದಿ ನೀರು ಸಮಸ್ಯೆ ಬಗೆಹರಿಯದೇ ಇದ್ದರೆ ಹಸಿವಿನಿಂದ ಸಾಯುತ್ತೇವೆ: ಪಾಕ್ ಸಂಸದ ಆತಂಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕಳೆದ ಒಂದು ತಿಂಗಳಲ್ಲಿ ಪಾಕಿಸ್ತಾನಕ್ಕೆ ಭಾರತ ಒಂದರ ಮೇಲೊಂದು ಶಾಕಿಂಗ್ ಕೊಡುತ್ತಾ ಬಂದಿದೆ. ಅದರಲ್ಲೂ ಸಿಂಧೂ ನದಿ ನೀರು ಹಂಚಿಕೆ ಸ್ಥಗಿತದ ನಿರ್ಧಾರ ದೊಡ್ಡ ಹೊಡೆತ ನೀಡಿದೆ.

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಸಂಸದ ಸೈಯ್ಯದ್ ಅಲಿ ಜಾಫರ್ ಅವರು ಕೂಡ ಈ ಕುರಿತು ಮಾತನಾಡಿದ್ದು, ನಾವು ಭಾರತದ ನದಿ ನೀರು ಸಮಸ್ಯೆ ಬಗೆಹರಿಸದೇ ಇದ್ದರೆ ಹಸಿವಿನಿಂದ ಸಾಯುತ್ತೇವೆ. ಪಾಕಿಸ್ತಾನದಲ್ಲಿ ಶೇ.90ರಷ್ಟು ಫಸಲು ಇಂಡಿಯಾನ್ ನದಿ ನೀರನ್ನೇ ಅವಲಂಭಿಸಿದೆ. ಈಗ ನಮ್ಮ ಮೇಲೆ ವಾಟರ್ ಬಾಂಬ್ ಬಿದ್ದಿದೆ ಎಂದು ಹೇಳಿದ್ದಾರೆ.

ಆ ವಾಟರ್ ಬಾಂಬ್ ಅನ್ನು ನಾವು ನಿಷ್ಕ್ರಿಯಗೊಳಿಸಬೇಕು. ಇಂಡಸ್ ನದಿ ಪಾತ್ರವೇ ನಮ್ಮ ಜೀವನಾಡಿ. ಪಾಕಿಸ್ತಾನದ 10 ರಲ್ಲಿ 9 ಮಂದಿ ಭಾರತದ ನದಿ ಪಾತ್ರದಲ್ಲಿ ವಾಸ ಇದ್ದಾರೆ. ಪಾಕಿಸ್ತಾನದ ಡ್ಯಾಂ, ಪವರ್ ಪ್ರಾಜೆಕ್ಟ್‌ಗಳೆಲ್ಲಾ ಇಂಡಸ್ ನದಿ ಪಾತ್ರದಲ್ಲಿವೆ. ಪಾಕಿಸ್ತಾನದಲ್ಲಿ ನೀರಿನ ಸಮಸ್ಯೆ ಬಗೆಹರಿಸದೇ ಇದ್ದರೆ, ನಾವು ಹಸಿವಿನಿಂದ ಸಾಯಬೇಕಾಗುತ್ತೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!