ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಸಿಬಿ ವಿರುದ್ಧ ಇಶಾನ್ ಕಿಶನ್ (94) ಸಿಡಿಸಿದ ಅಬ್ಬರದ ಅರ್ಧಶತಕದ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 231 ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಮೊದಲ ವಿಕೆಟ್ಗೆ 54 ರನ್ಗಳ ಜೊತೆಯಾಟ ನಡೆಸಿತು. ಅಭಿಷೇಕ್ ಶರ್ಮಾ 17 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್ಗಳ ಸಹಿತ 34 ರನ್ಗಳಿಸಿದರೆ, ಟ್ರಾವಿಸ್ ಹೆಡ್ 10 ಎಸೆತಗಳಲ್ಲಿ 17 ರನ್ಗಳಿಸಿ ಭುನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಶೆಫರ್ಡ್ಗೆ ಕ್ಯಾಚ್ ನೀಡಿದರು. ನಂತರ ಹೆನ್ರಿಚ್ ಕಿಶನ್ 3ನೇ ವಿಕೆಟ್ಗೆ 47 ರನ್ಗಳಿಸಿದರು. ಕ್ಲಾಸೆನ್ 13 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ಗಳ ಸಹಿತ 24 ರನ್ಗಳಿಸಿ ಸುಯಾಶ್ ಶರ್ಮಾ ಬೌಲಿಂಗ್ನಲ್ಲಿ ಶೆಫರ್ಡ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ಅನಿಕೇತ್ ವರ್ಮಾ ಕೇವಲ 26 ರನ್ಗಳಿಸಿದರು. ವರ್ಮಾ ಇಶಾನ್ ಕಿಶನ್ ಜೊತೆಗೆ ಕೇವಲ 17 ಎಸೆತಗಳಲ್ಲಿ 43 ರನ್ಗಳ ಜೊತೆಯಾಟ ನಡೆಸಿದರು. ನಿತೀಶ್ ಕುಮಾರ್ ರೆಡ್ಡಿ (4) ಹಾಗೂ ಅಭಿನವ್ ಮನೋಹರ್ (12) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. 3ನೇ ಕ್ರಮಾಂಕದಲ್ಲಿ ಬಂದು ಕೊನೆಯವರೆಗೂ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ 48 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ಗಳ ಸಹಿತ ಅಜೇಯ 94 ರನ್ಗಳಿಸಿದರೆ, ನಾಯಕ ಪ್ಯಾಟ್ ಕಮಿನ್ಸ್ 6 ಎಸೆತಗಳಲ್ಲಿ ಅಜೇಯ 13 ರನ್ಗಳಿಸಿದರು.