ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹಾಗೂ ಪ್ಯಾನ್ ಇಂಡಿಯಾ ಸೂಪರ್ಸ್ಟಾರ್ ಪ್ರಭಾಸ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಬಹುನಿರೀಕ್ಷಿತ ಚಿತ್ರ ‘ಸ್ಪಿರಿಟ್’ ಚಿತ್ರದ ಕುರಿತು ಸಾಕಷ್ಟು ಚರ್ಚೆಗಳು ಕೇಳಿ ಬರುತ್ತಿವೆ.
ಇದೀಗ ಒಂದು ರೋಚಕ ಸುದ್ದಿ ಟಾಲಿವುಡ್ ಮತ್ತು ಸ್ಯಾಂಡಲ್ವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ‘ಸ್ಪಿರಿಟ್’ ಚಿತ್ರಕ್ಕೆ ನಾಯಕಿಯಾಗಿ ಈಗ ಕನ್ನಡದ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್ ಅವರನ್ನು ಪರಿಗಣಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಚಿತ್ರಕ್ಕೆ ನಾಯಕಿಯಾಗಿ ಮೊದಲು ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಅವರ ಹೆಸರು ಕೇಳಿಬಂದಿತ್ತು.
ದೀಪಿಕಾ ಪಡುಕೋಣೆ ತಮ್ಮ ಬೇಡಿಕೆಗಳು ಮತ್ತು ಡೇಟ್ಸ್ ಸಮಸ್ಯೆಯಿಂದಾಗಿ ಈ ಪ್ರಾಜೆಕ್ಟ್ನಿಂದ ಹೊರಗುಳಿದಿದ್ದಾರೆ ಎಂಬ ವದಂತಿಗಳಿವೆ. ಹೀಗಾಗಿ ‘ಸ್ಪಿರಿಟ್’ ಚಿತ್ರತಂಡವು ನಾಯಕಿಯ ಪಾತ್ರಕ್ಕಾಗಿ ರುಕ್ಮಿಣಿ ವಸಂತ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಚಿತ್ರತಂಡದಿಂದಾಗಲೀ ಅಥವಾ ನಟಿಯರಿಂದಾಗಲೀ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.