ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಸುಧಾಕರ್ ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೌತಶಾಸ್ತ್ರದಲ್ಲಿ 1 ಗ್ರೇಸ್ ಅಂಕ, ರಸಾಯನಶಾಸ್ತ್ರ 2 ಪ್ರಶ್ನೆಗೆ ಎರಡು ಸರಿ ಉತ್ತರ, ಜೀವಶಾಸ್ತ್ರಕ್ಕೆ 1 ಪ್ರಶ್ನೆಗೆ ಎರಡು ಸರಿ ಉತ್ತರ ಎಂದು ಪರಿಗಣನೆ ಮಾಡಲಾಗಿದೆ ಎಂದು ತಿಳಿಸಿದರು.
ಸಿಇಟಿ ಪರೀಕ್ಷೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದರು. ಈ ಪೈಕಿ 3,11,991 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷಾ ಕೇಂದ್ರದಲ್ಲಿ ಫೇಸ್ ರೀಡಿಂಗ್ ತಂತ್ರಜ್ಞಾನ ಮಾಡಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಕೆಇಎ ಅಧಿಕೃತ ವೆಬ್ಸೈಟ್ಗಳಾದ cetonline.karnataka.gov.in ಮತ್ತು karresults.nic.inನಲ್ಲಿ ಫಲಿತಾಂಶ ಲಭ್ಯವಿರಲಿದೆ.
ಒಟ್ಟು ಪರೀಕ್ಷೆಗೆ ಅರ್ಜಿ ಹಾಕಿದವರು- 3,30,787
ಪರೀಕ್ಷೆ ಹಾಜರಾದವರು- 3,11,991
ಸಿಇಟಿ ರ್ಯಾಂಕ್ ಪಡೆದವರು- 2,75,677
ಎಷ್ಟು ಮಂದಿಗೆ ರ್ಯಾಂಕ್?
ಎಂಜಿನಿಯರ್ – 2,62,195
BNYS – 1,98,679
ಅಗ್ರಿಕಲ್ಚರ್ 2,14,588
ವೆಟರ್ನರಿ- 2,18,282
B ಫಾರ್ಮ್ – 2,66,256
ಫಾರ್ಮ್ D – 2,66,757
ನರ್ಸಿಂಗ್ 2,08,171 ವಿದ್ಯಾರ್ಥಿಗಳು.