ಆಲೂಗಡ್ಡೆಯಿಂದ ಮಾಡಿರುವ ಫ್ರೆಂಚ್ ಫ್ರೈಸ್ ತಿಂದು ಬೋರಾಗಿದ್ಯಾ? ಹಾಗದ್ರೆ ಇವತ್ತೊಂದು ಸ್ಪೆಷಲ್ ಸಾಬೂದಾನ ಫ್ರೈಸ್ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು:
ಸಾಬೂದಾನ- ಒಂದು ಕಪ್
ನೀರು- ಅಗತ್ಯಕ್ಕೆ ತಕ್ಕಷ್ಟು
ಆಲೂಗಡ್ಡೆ- ಎರಡು
ಉಪ್ಪು ರುಚಿಗೆ ತಕ್ಕಷ್ಟು
ಕಡಲೆಕಾಯಿ- ಅರ್ಧ ಕಪ್
ಕೊತ್ತಂಬರಿ ಪುಡಿ – ಎರಡು ಚಮಚ
ತುರಿದ ಶುಂಠಿ – ಒಂದು ಚಮಚ
ಬೆಳ್ಳುಳ್ಳಿ- ಒಣಮೆಣಸಿನಕಾಯಿ ಪೇಸ್ಟ್ – ಒಂದು ಚಮಚ
ಜೀರಿಗೆ ಪುಡಿ – ಅರ್ಧ ಚಮಚ
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ತಯಾರಿಸುವ ವಿಧಾನ:
ಸಾಬೂದಾನ ಫ್ರೈಸ್ ಮಾಡಲು ಸಾಬೂದಾನವನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿಡಿ.
ಮೊದಲಿಗೆ ಆಲೂಗೆಡ್ಡೆಯನ್ನು ಬೇಯಿಸಿಟ್ಟುಕೊಳ್ಳಿ. ನಂತರ ಕಡಲೆಕಾಯಿ ಹಾಕಿ ಹುರಿದು ನುಣ್ಣಗೆ ಪುಡಿ ಮಾಡಿ. ಈಗ ಒಂದು ಬಟ್ಟಲಿನಲ್ಲಿ ನೆನೆಸಿಟ್ಟ ಸಾಬೂದಾನ, ಬೇಯಿಸಿದ ಆಲೂಗಡ್ಡೆ, ನುಣ್ಣಗೆ ಪುಡಿಮಾಡಿದ ಕಡಲೆಕಾಯಿ ಮಿಶ್ರಣ, ಕೊತ್ತಂಬರಿ ಸೊಪ್ಪು ಮತ್ತು ತುರಿದ ಶುಂಠಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಜೀರಿಗೆ ಪುಡಿ ಮತ್ತು ಬೆಳ್ಳುಳ್ಳಿ-ಒಣಮೆಣಸಿನಕಾಯಿ ಪೇಸ್ಟ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಇದು ಚಪಾತಿ ಹಿಟ್ಟಿನಂತೆ ತುಂಬಾ ಗಟ್ಟಿಯಾಗಿರಬೇಕು. ನಂತರ ಈ ಹಿಟ್ಟಿನಿಂದ ಫ್ರೈಸ್ ರೀತಿ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿದರೆ ಸಾಬೂದಾನ ಫ್ರೈಸ್ ರೆಡಿ.