ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಇದೀಗ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು ಹಾಗಾಗಿ ನಾಳೆಯಿಂದ ರಾಜ್ಯದ 8 ಮೆಡಿಕಲ್ ಕಾಲೇಜ್ ಗಳಲ್ಲಿ ಕೋವಿಡ್ ಟೆಸ್ಟ್ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.
ಈ ಕುರಿತು ಸಭೆ ಮಾಡಿ ತಾಂತ್ರಿಕ ಸಲಹಾ ಸಮಿತಿ ಆರೋಗ್ಯ ಸಚಿವರಿಗೆ ಈ ಕುರಿತು ಸಲಹೆ ನೀಡಿದೆ. ಸಲಹಾ ಸಮಿತಿ ಸೂಚನೆ ಮೇರೆಗೆ ಕೋವಿಡ್ ಟೆಸ್ಟ್ ಗೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೀಗ ಉಸಿರಾಟ ಸಮಸ್ಯೆ, SARI ಕೇಸ್ ನಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ ಎಂದು ಆರೋಗ್ಯ ಸಚಿವ ಗಣೇಶ ಗುಂಡುರಾವ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಒಂದು ತಿಂಗಳಿಗೆ ಆಗುವಷ್ಟು ಟೆಸ್ಟ್ ಕಿಟ್ ತೆಗೆದು ಇಡುವಂತೆ ಸೂಚನೆ ನೀಡಿದ್ದಾರೆ.
ಉಸಿರಾಟದ ತೊಂದರೆ ಇರುವವರು SARI ಪ್ರಕರಣ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಕೋವಿಡ್ ಟೆಸ್ಟ್ ಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಕೋವಿಡ್ ಟೇಸ್ಟ್ ಮಾಡಿಸುವಂತೆ ಸೂಚನೆ ನೀಡಿದ್ದು, ಜನಸಂದಣಿ ಇರುವ ಕಡೆಗೆ ಬಾಣಂತಿಯರು ಮಾಸ್ಕ್ ಧರಿಸಲು ಸಲಹೆ ನೀಡಿದ್ದಾರೆ. ಇಲಾಖೆಯ ಮಾರ್ಗಸೂಚಿಯಂತೆ ಮುಂಜಾಗ್ರತೆ ವಹಿಸಿದರೆ ಸಾಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕಟಣೆ ಹೊರಡಿಸಿದ್ದಾರೆ.