ನಾಯಕತ್ವದಿಂದ ಹೊರಗುಳಿದ ಜಸ್ಪ್ರಿತ್ ಬುಮ್ರಾ! ಇದ್ರ ಹಿಂದಿರೋ ಕಾರಣ ಬಿಚ್ಚಿಟ್ಟ ಅಜಿತ್ ಅಗರ್ಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜುಲೈ 20 ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಶುಭ್‌ಮಾನ್ ಗಿಲ್ ನಾಯಕತ್ವದ ತಂಡವನ್ನು BCCI ಘೋಷಣೆ ಮಾಡಿದೆ. ಆದರೆ ಕಳೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಮುನ್ನಡೆಸಿದ್ದ ಜಸ್ಪ್ರಿತ್ ಬುಮ್ರಾ ನಾಯಕನಾಗ್ತಾರೆ ಎಂದು ಹೇಳಲಾಗಿತ್ತು. ಆದರೆ ಇದು ಸುಳ್ಳಾಗಿದೆ.

ಬಿಸಿಸಿಐ ಈ ಬಾರಿ ಬುಮ್ರಾ ಅವರನ್ನು ಕೇವಲ ಆಟಗಾರನನ್ನಾಗಿ ಮಾತ್ರ ಘೋಷಣೆ ಮಾಡಿದೆ. ಅದಕ್ಕೆ ಕಾರಣವನ್ನೂ ಕೂಡ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ತಿಳಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆಯುವ ಐದು ಟೆಸ್ಟ್ ಪಂದ್ಯಗಳಿಗೆ ಜಸ್ಪ್ರಿತ್ ಬುಮ್ರಾ ಲಭ್ಯವಿರುವುದಿಲ್ಲ. ಈ ಕಾರಣಕ್ಕಾಗಿಯೇ ಅವರು ಟೆಸ್ಟ್ ನಾಯಕತ್ವದ ರೇಸ್‌ನಿಂದ ಹೊರಗುಳಿದಿದ್ದಾರೆ ಅಗರ್ಕರ್ ಅವರು ಹೇಳಿದ್ದಾರೆ.

ಜೊತೆಗೆ ತಂಡವನ್ನು ಮುನ್ನಡೆಸುವಾಗ 15 ರಿಂದ 16 ಜನರನ್ನು ನಿಭಾಯಿಸಬೇಕು ಇದು ಸವಾಲಿನ ಕೆಲಸ, ಬುಮ್ರಾ ಫಿಟ್ ಆಗಿಲ್ಲದೆ ಇರವುದರಿಂದ ಅವರನ್ನು ನಾಯಕತ್ವದಿಂದ ದೂರ ಇಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!